’ರಮ್ಯಾ ಅವರೇ ಯಾವ ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಇದೆ ಹೇಳಿ’

MLA C T Ravi Slams Ramya
Highlights

ನಾವು ರಾಜಮಾರ್ಗದಲ್ಲೇ ನಡೆಯೋದು. ಹಿಂಬಾಗಿಲ ರಾಜಕಾರಣ ನಾವು ಮಾಡಲ್ಲ.  ಈ ಹಿಂದೆ ವಾಜಪೇಯಿ ಪ್ರಧಾನಿ ಆಗಿ ಬಹುಮತ ಸಾಬೀತುಪಡಿಸದೇ ಇದ್ದಾಗ ಹೊರ ಬಂದರು. ಅದು ನಿಜವಾದ ರಾಜಮಾರ್ಗ.  ಆ ಮಾರ್ಗದಲ್ಲೇ ನಾವು ನಡೆಯೋದು ಎಂದು ಶಾಸಕ ಸಿ ಟಿ ರವಿ ಹೇಳಿದ್ದಾರೆ. 
 

ಬೆಂಗಳೂರು (ಮೇ. 18): ನಾವು ರಾಜಮಾರ್ಗದಲ್ಲೇ ನಡೆಯೋದು. ಹಿಂಬಾಗಿಲ ರಾಜಕಾರಣ ನಾವು ಮಾಡಲ್ಲ.  ಈ ಹಿಂದೆ ವಾಜಪೇಯಿ ಪ್ರಧಾನಿ ಆಗಿ ಬಹುಮತ ಸಾಬೀತುಪಡಿಸದೇ ಇದ್ದಾಗ ಹೊರ ಬಂದರು. ಅದು ನಿಜವಾದ ರಾಜಮಾರ್ಗ.  ಆ ಮಾರ್ಗದಲ್ಲೇ ನಾವು ನಡೆಯೋದು ಎಂದು ಶಾಸಕ ಸಿ ಟಿ ರವಿ ಹೇಳಿದ್ದಾರೆ. 

ರಾಜ ಮಾರ್ಗದಲ್ಲೇ ನಾವು ನಡೆಯೋದು. ಕಾಂಗ್ರೆಸ್-ಜೆಡಿಎಸ್ ರೀತಿ ಅಲ್ಲ.  ಈಗಾಗಲೇ  ನಮ್ಮ ನೂತನ ಸಿಎಂ ಸ್ಪಷ್ಟಪಡಿಸಿದ್ದಾರೆ. ಜನಾದೇಶಕ್ಕೆ ಕಾಂಗ್ರೆಸ್ ಬೆಲೆ ಕೊಡ್ಬೇಕು. ಬಿಜೆಪಿ ಸರ್ಕಾರ ಉಳಿಸೋಕೆ ವಿಶ್ವಾಸ ಮತ ಕೊಡ್ತಾರೆ ಅನ್ನೋ ನಂಬಿಕೆ ಇದೆ.  ಸಿದ್ದರಾಮಯ್ಯ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ನ 7 ಶಾಸಕರಿಂದ ಮತ ಹಾಕಿಸಿದ್ರು.  ಇವಾಗ ಬಿಜೆಪಿ ಬಗ್ಗೆ ಮಾತಾಡ್ತಾರೆ.  ಸಿದ್ದರಾಮಯ್ಯಗೆ ಯಾವ ನೈತಿಕತೆ ಇದೆ ಎಂದು ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ. 

ಬಿಜೆಪಿ ಬಂದರೆ  ಸಿದ್ದರಾಮಯ್ಯ ಅಕ್ರಮದ ವಿರುದ್ಧ ತನಿಖೆ ನಡೆಯುತ್ತದೆಂಬ ಭಯವಿದೆ.  ಅದಕ್ಕೆ ಜೆಡಿಎಸ್ ಗೆ ಬೆಂಬಲ ಕೊಟ್ಟಿದ್ದಾರೆ.  ಸುಳ್ಳು ಸುದ್ದಿ ಹಬ್ಬಿಸೋದ್ರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು.  ಸಿದ್ದರಾಮಯ್ಯ ಅವರಪ್ಪನ ಆಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಅಂದಿದ್ದರು. ಈಗ ಅವರೊಡನೆ ಮೈತ್ರಿಗೆ ಮುಂದಾಗಿದ್ದಾರೆ. ಇದೊಂದು ಅಪವಿತ್ರ ಮೈತ್ರಿ ಎಂದು ಟೀಕಿಸಿದ್ದಾರೆ.  

ರಮ್ಯಾ ಟ್ವೀಟ್’ಗೆ ತಿರುಗೇಟು ಕೊಡುತ್ತಾ,  ರಮ್ಯಾ ಏನು ಕಾಂಗ್ರೆಸ್ ಶಾಸಕಿ ಅಲ್ವಲ್ಲ.  ಯಾವ ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಇದೆ ಅನ್ನೋದನ್ನು ಬಹಿರಂಗವಾಗಿ ಹೇಳಲಿ.  ಡಿಜಿ ಮೂಲಕ ನಾನು ಕೂಡ ರಕ್ಷಣೆ  ಕೊಡಿಸುವಂತೆ ಮನವಿ ಮಾಡುತ್ತೇನೆ.   ಯಾವ ಶಾಸಕರ ಪತ್ನಿ ಮಕ್ಕಳು ರಮ್ಯಾ ಬಳಿ ಅವಲತ್ತುಕೊಂಡ್ರು ಅನ್ನೋದನ್ನು ಹೇಳಲಿ. ಅವರ ಜೊತೆಗೆ ರಮ್ಯಾನಿಗೂ ಜೀವ ಬೆದರಿಕೆ ಇದ್ರೇ ರಕ್ಷಣೆ ಕೊಡುವಂತೆ ನಾನು ಡಿಜಿಗೆ ಮನವಿ ಮಾಡಲಿದ್ದೇನೆ ಎಂದು  ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ. 


 

loader