ಮೇ 17ರಂದು ಮೋದಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ: ಬಿಎಸ್’ವೈ

May 17 I Take a Oath as CM of Karnataka
Highlights

ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ನಾನೇ ಸಿಎಂ ಆಗುತ್ತೇನೆ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಇಂದು ಮತ್ತೆ ನಾನೇ ಸಿಎಂ ಎಂದು ಪುನರುಚ್ಚರಿಸಿದ್ದಾರೆ. 

ಶಿವಮೊಗ್ಗ (ಮೇ. 02):  ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ನಾನೇ ಸಿಎಂ ಆಗುತ್ತೇನೆ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಇಂದು ಮತ್ತೆ ನಾನೇ ಸಿಎಂ ಎಂದು ಪುನರುಚ್ಚರಿಸಿದ್ದಾರೆ. 

ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್ ವೈ ಮೇ 17 ಅಥವ 18ರಂದು  ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಇದರಲ್ಲಿ ಗುಲಗಂಜಿಯಷ್ಟು ಅನುಮಾನ ಬೇಡ ಎಂದಿದ್ದಾರೆ. ಈ ಕಾರ್ಯಕ್ರದಲ್ಲಿ ಯುಪಿ ಸಿಎಂ ಅದಿತ್ಯನಾಥ್ ಸೇರಿದಂತ ಬಿಜೆಪಿ ಅಧಿಕಾರ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಚಿವರು ಸಹ ಭಾಗವಹಿಸಲಿದ್ದಾರೆ ಎಂದು ಈ ಸಮಯದಲ್ಲಿ ಯಡಿಯೂರಪ್ಪ ಹೇಳಿದರು.

loader