ರಾಜರಾಜೇಶ್ವರಿನಗರ ಹಾಗೂ ಜಯನಗರ ದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಕ್ಷೇತ್ರದ ಜನರು ಈ ಕ್ಷೇತ್ರಗಳ ಬಾರ್‌ಗಳಿಗೆ ಮುಗಿ ಬಿದ್ದಿದ್ದರು. ಹೀಗಾಗಿ ಚುನಾವಣಾ ಕ್ಷೇತ್ರಗಳಿಗಿಂತ ಈ ಕ್ಷೇತ್ರಗಳೇ ಹೆಚ್ಚು ಚುನಾವಣಾ ರಂಗು ಪಡೆದಿದ್ದವು.
ಬೆಂಗಳೂರು : ರಾಜರಾಜೇಶ್ವರಿನಗರ ಹಾಗೂ ಜಯನಗರ ದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಕ್ಷೇತ್ರದ ಜನರು ಈ ಕ್ಷೇತ್ರಗಳ ಬಾರ್‌ಗಳಿಗೆ ಮುಗಿ ಬಿದ್ದಿದ್ದರು. ಹೀಗಾಗಿ ಚುನಾವಣಾ ಕ್ಷೇತ್ರಗಳಿಗಿಂತ ಈ ಕ್ಷೇತ್ರಗಳೇ ಹೆಚ್ಚು ಚುನಾವಣಾ ರಂಗು ಪಡೆದಿದ್ದವು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಕಲಿ ಗುರುತಿನ ಚೀಟಿ ಹಗರಣದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಹಾಗೂ ಬಿಜೆಪಿ ಅಭ್ಯರ್ಥಿ ಅಕಾಲಿಕ ಮರಣದಿಂದ ಜಯನಗರ ವಿಧಾನಸಭಾ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಈ ಕ್ಷೇತ್ರಗಳಿಗೆ ಅನ್ವಯಿಸುವುದಿಲ್ಲ.
ಹೀಗಾಗಿ ಎಲ್ಲಾ ಬಾರ್‌ಗಳು ತೆರೆದಿದ್ದವು.
ಪಕ್ಕದ ಯಶವಂತಪುರ ಕ್ಷೇತ್ರ, ಮಹಾಲಕ್ಷ್ಮೀ ಬಡಾವಣೆ ಕ್ಷೇತ್ರ, ಗೋವಿಂದರಾಜನಗರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದ ಮತದಾರರು ರಾಜರಾಜೇಶ್ವರಿನಗರಕ್ಕೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಈ ಎರಡೂಕ್ಷೇತ್ರ ಶನಿವಾರ ಮದ್ಯಪ್ರಿಯರ ಪಾಲಿಗೆ ಸ್ವರ್ಗವಾಗಿ ಬದಲಾಗಿದ್ದವು.
