ಬೆಂಗಳೂರು :  ಮತದಾನ ಮಾಡಿದ ಬಳಿಕ ಮತಗಟ್ಟೆ ವ್ಯಾಪ್ತಿಯಲ್ಲಿಯೇ ಮಾತೇ ಮಹಾದೇವಿ ಯಡವಟ್ಟು ಮಾಡಿಕೊಂಡಿದ್ದಾರೆ. 

ಮತ ಚಲಾಯಿಸಿದ ಬಳಿಕ ಮಾತೇ ಮಹಾದೇವಿ  ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಹೊಗಳಿದ್ದಾರೆ. ಮಾತೆ ಮಹಾದೇವಿ ಮತಗಟ್ಟೆ ವ್ಯಾಪ್ತಿಯಲ್ಲಿ ಕುಳಿತು ಕಾಂಗ್ರೆಸ್ ಪರ ಮಾತಾಡಿದ್ದಾರೆ.  ಮಾಧ್ಯಮಗಳಿಗೆ ಮತದಾನ ಕುರಿತು ಪ್ರತಿಕ್ರಿಯೆ ನೀಡುವಾಗಲೇ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. 

ಮತಗಟ್ಟೆ ವ್ಯಾಪ್ತಿಯಲ್ಲಿ ಮಾಧ್ಯಮಗಳಿಗೆ ಈ ರೀತಿ ಮಾತನಾಡುವ ವೇಳೆ  ಚುನಾವಣಾಧಿಕಾರಿಗಳು ಅವರಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಈ ರೀತಿ ಮಾತನಾಡಲು ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ 

ಮತಗಟ್ಟೆ ಬಳಿಯಲ್ಲಿಯೇ ಹೀಗೆ ಪಕ್ಷವೊಂದರ ಪರ ಮಾತಾಡಿದ ಬಳಿಕ ಅವರು ಈ  ಬಗ್ಗೆ ತಮಗೆ ತಿಳಿದಿರಲಿಲ್ಲ, ಕ್ಷಮಿಸಿ ಎಂದು ಹೇಳಿದ್ದಾರೆ.