ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ 50ಕ್ಕೂ ಅಧಿಕ ಕಾರ್ಯಕರ್ತರು

Many Congress Leaders Join JDS In Mysuru
Highlights

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಪಕ್ಷಾಂತರ ಪರ್ವವೂ ಕೂಡ ನಿರಂತರವಾಗಿದೆ. ಪಕ್ಷದಿಂದ ಪಕ್ಷಕ್ಕೆ ನಾಯಕರ ವಲಸೆ ಹೆಚ್ಚುತ್ತಲೇ ಇದೆ. 
ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜೆಡಿಎಸ್’ನ ಜಿಟಿ ದೇವೇಗೌಡರ ಪ್ರಭಲ ಪೈಪೋಟಿಗೆ ಸಾಕ್ಷಿಯಾಗಲಿರುವ  ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವೂ ಇಂತಹ ಪಕ್ಷಾಂತರಕ್ಕೆ ಸಾಕ್ಷಿಯಾಗಿದೆ. 

ಮೈಸೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಪಕ್ಷಾಂತರ ಪರ್ವವೂ ಕೂಡ ನಿರಂತರವಾಗಿದೆ. ಪಕ್ಷದಿಂದ ಪಕ್ಷಕ್ಕೆ ನಾಯಕರ ವಲಸೆ ಹೆಚ್ಚುತ್ತಲೇ ಇದೆ.
ಒಂದು ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷದ ಕೈ ಹಿಡಿಯುವ ಮೂಲಕ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ. 

  ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜೆಡಿಎಸ್’ನ ಜಿ.ಟಿ ದೇವೇಗೌಡರ ಪ್ರಭಲ ಪೈಪೋಟಿಗೆ ಸಾಕ್ಷಿಯಾಗಲಿರುವ  ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವೂ ಇಂತಹ ಪಕ್ಷಾಂತರಕ್ಕೆ ಸಾಕ್ಷಿಯಾಗಿದೆ. 

ಇಲ್ಲಿನ ಬೆಳವಾಡಿ ಗ್ರಾಮದಲ್ಲಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಕೈ ಹಿಡಿದಿದ್ದಾರೆ. ಸುಮಾರು 50ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಜಿಟಿ ದೇವೇಗೌಡ ನೇತೃತ್ವದಲ್ಲಿ ಪಕ್ಷವನ್ನು ಸೇರಿದ್ದಾರೆ.

ಇಲ್ಲಿ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡರು ಜೆಡಿಎಸ್’ನತ್ತ ಜನರನ್ನು ಸೆಳೆಯುವ ಯತ್ನದಲ್ಲಿ ಬಿಗ್ ಆಪರೇಷನ್ ನಡೆಸುತ್ತಿದ್ದಾರೆ.

ಮತದಾನ ನಿಮ್ಮ ಹಕ್ಕು - ತಪ್ಪದೇ ಬಂದು ಮತ ಚಲಾಯಿಸಿ : ಮೇ 12

loader