ಮೋದಿಯ ಭಾಷೆ ಅತ್ಯಂತ ಕೆಳಮಟ್ಟದ್ದು : ಮನಮೋಹನ್ ಸಿಂಗ್

Manamohan Sing Slmas PM Narendra Modi
Highlights

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಾಗಿ ಆಡುತ್ತಿರುವ ಭಾಷೆ ಕೇಳಿದರೆ ಆತಂಕವಾಗುತ್ತದೆ. ಇನ್ನಾದರೂ ಪ್ರಧಾನಮಂತ್ರಿಗಳ ಕಚೇರಿಯ ಘನತೆಗೆ ಕುಂದು ತರದಂತೆ ಮೋದಿ ನಡೆದುಕೊಳ್ಳಬೇಕು. ಹೀಗಂತ ಸಭ್ಯ ರಾಜಕಾರಣಿ ಎಂದೇ ಹೆಸರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮೋದಿ ಅವರಿಗೆ ಕರೆ ನೀಡಿದ್ದಾರೆ. 

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಾಗಿ ಆಡುತ್ತಿರುವ ಭಾಷೆ ಕೇಳಿದರೆ ಆತಂಕವಾಗುತ್ತದೆ. ವಿಚಾರಹೀನವಾಗಿ ಕೆಳಮಟ್ಟದ ಭಾಷೆ ಬಳಕೆಯಾಗುತ್ತಿದೆ. ಒಬ್ಬ ಪ್ರಧಾನಿಯಾದವರು ಈ ಮಟ್ಟದಲ್ಲಿ ಮಾತನಾಡಬಾರದು. ಇನ್ನಾದರೂ ಪ್ರಧಾನಮಂತ್ರಿಗಳ ಕಚೇರಿಯ ಘನತೆಗೆ ಕುಂದು ತರದಂತೆ ಮೋದಿ ನಡೆದುಕೊಳ್ಳಬೇಕು. ಹೀಗಂತ ಸಭ್ಯ ರಾಜಕಾರಣಿ ಎಂದೇ ಹೆಸರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮೋದಿ ಅವರಿಗೆ ಕರೆ ನೀಡಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆಗಾಗಿ ಆಡುತ್ತಿರುವ ಭಾಷೆ ಕೇಳಿದರೆ ಆತಂಕವಾಗುತ್ತದೆ. ವಿಚಾರಹೀನವಾಗಿ ಕೆಳಮಟ್ಟದ ಭಾಷೆ ಬಳಕೆಯಾಗುತ್ತಿದೆ. ಒಬ್ಬ ಪ್ರಧಾನಿ ಯಾದವರು ಈ ಮಟ್ಟದಲ್ಲಿ ಮಾತನಾಡಬಾ ರದು. ಇನ್ನಾದರೂ ಪ್ರಧಾನಮಂತ್ರಿಗಳ ಕಚೇರಿಯ ಘನತೆಗೆ ಕುಂದು ತರದಂತೆ ಮೋದಿ ನಡೆದುಕೊಳ್ಳಬೇಕು. ಹೀಗಂತ ಸಭ್ಯ ರಾಜಕಾರಣಿ ಎಂದೇ ಹೆಸರಾದ ಮಾಜಿ  ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕರೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಎಸ್‌ಟಿ, ಡಿಮಾನಿಟೈಸೇಷನ್ ಸೇರಿದಂತೆ ಹಲವು ಕೆಟ್ಟ ತೀರ್ಮಾನಗಳ ಮೂಲಕ ದೇಶದ  ಪ್ರಗತಿ ಕುಂಠಿತಗೊಳಿಸಿದ್ದಾರೆ. ನಾಲ್ಕು ವರ್ಷಗಳ ಅವರ ಆಡಳಿತದಿಂದ ದೇಶದಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತವಾಗಿ, ರೈತರು ಹಾಗೂ ಯುವಕರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ತಮ್ಮ ಸರ್ಕಾರದ ಕೆಟ್ಟ ತೀರ್ಮಾನಗಳ ಮೂಲಕ ದೇಶದ ಪ್ರಗತಿ ಹಿಮ್ಮುಖವಾಗಿ ಸಾಗುವಂತೆ ಮಾಡಿದ್ದಾರೆ.

ಹೀಗಿದ್ದರೂ ಕಳೆದ ನಾಲ್ಕು ವರ್ಷದಿಂದ  ಒಂದೂ ಸುದ್ದಿಗೋಷ್ಠಿ ಮಾಡದ ನರೇಂದ್ರ ಮೋದಿ ಅವರು, ಚುನಾವಣೆ ವೇಳೆಯಲ್ಲಿ ಮಾತ್ರ ವಿಚಾರಹೀನ ಹಾಗೂ ಕೀಳು ಭಾಷೆ ಬಳಕೆ ಮಾಡುತ್ತಾರೆ. ತನ್ಮೂಲಕ ಪ್ರಧಾನಮಂತ್ರಿ ಹುದ್ದೆಯ ಘನತೆಗೆ ಚ್ಯುತಿ ತರುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇನ್ನಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಂವಿಧಾನದ ಅತ್ಯುನ್ನತ ಸ್ಥಾನದ ಘನತೆ ಉಳಿಸುವಂತೆ ಉತ್ತಮ ಭಾಷೆ ಬಳಸುತ್ತಾರೆ, ಅಭಿವೃದ್ಧಿಪರ ಚರ್ಚೆಗಳ ಮೂಲಕ ಚುನಾವಣೆ ಎದುರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ  ದಿನಗಣನೆ ಶುರುವಾಗಿದೆ. ಕರ್ನಾಟಕ ಚುನಾವಣೆ ಫಲಿತಾಂಶ 2019 ರ ಲೋಕಸಭೆ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ನರೇಂದ್ರ ಮೋದಿ ಅವರ ಆಡಳಿತದಿಂದ ಉಂಟಾಗುತ್ತಿರುವ ಸಮಸ್ಯೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಪರ ಆಡಳಿತದ ತುಲನೆ ಮಾಡಿ ಜನರು ಮತ ನೀಡಬೇಕು ಎಂದರು.

ದೇಶದಲ್ಲಿ ಕಠಿಣ ಪರಿಸ್ಥಿತಿ ನಿರ್ಮಾಣವಾ ಗಿದ್ದು, ರೈತರು ಸಮಸ್ಯೆಗಳಿಂದ ನರಳುತ್ತಿದ್ದರೆ ಯುವಜನರ ಉದ್ಯೋಗಾವಕಾಶ ಕುಸಿಯು ತ್ತಿದೆ. ಆರ್ಥಿಕತೆ ಪ್ರಗತಿ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿಯುತ್ತಿದೆ. ದೇಶ ಇಂತಹ ಪರಿಸ್ಥಿತಿಯಲ್ಲಿ ಇರುವಾಗ ನೀತಿ ನಿರೂಪಣೆ ಸ್ಥಾನದಲ್ಲಿ ಇರುವವರು ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡಬಾರದು. ದೇಶದ ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಆದರೆ, ಮೋದಿ ಈ ದಿಸೆಯಲ್ಲಿ ಗಮನ ನೀಡುತ್ತಿಲ್ಲ. ನಿಮ್ಮ ಉದ್ದೇಶ ಒಳ್ಳೆಯ ದಿರಬಹುದು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಆ ಒಳ್ಳೆಯ ಉದ್ದೇಶ ಸಾಧನೆಗೆ ಕೈಗೊಳ್ಳುವ ಕ್ರಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ದೇಶಕ್ಕೆ ನಷ್ಟ ಎಂದರು. 

ಮೋದಿಯ ಎರಡು ದೊಡ್ಡ ಪ್ರಮಾದ: ನರೇಂದ್ರ ಮೋದಿ ಸರ್ಕಾರದ ಅತಿ ದೊಡ್ಡ ಪ್ರಮಾದಗಳು ಎಂದರೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯ ಅಸಮರ್ಪಕ ಅನುಷ್ಠಾನ. ಇದರಿಂದ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ತೀವ್ರ ನಷ್ಟ ಉಂಟಾಗಿದೆ. ಕಾರ್ಪೊರೇಟ್ ಕಂಪನಿಗಳ 2.41 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿರುವ ಮೋದಿ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡುತ್ತಿಲ್ಲ. ಯುಪಿಎ-೨ ಸರ್ಕಾರದ ಅವಧಿಯಲ್ಲಿ ಸರಾಸರಿ ಎಂಎಸ್‌ಪಿ ವೃದ್ಧಿ 19.3 ರಷ್ಟಿತ್ತು. ಎನ್‌ಡಿಎ ಸರ್ಕಾರದ ವೇಳೆಗೆ ಇದು 3.6 ಕ್ಕೆ ಕುಸಿದಿದೆ ಎಂದರು.

loader