ನಾವು ಹೆದರು ಪುಕ್ಕಲರಲ್ಲ: ಮೋದಿಗೆ ವಿಪಕ್ಷಗಳ ಸೆಡ್ಡು

First Published 23, May 2018, 2:58 PM IST
Mamata Banerjee Seek Regional Parties for third front
Highlights

ನಾವು ಹೆದರು ಪುಕ್ಕಲರಲ್ಲ. ಪ್ರಾದೇಶಿಕ ಪಕ್ಷದ ನಾಯಕರು ಒಂದೆಡೆ ಸೇರಿದಾಕ್ಷಣ ದೇಶದಲ್ಲಿ ತೃತೀಯ ರಂಗದಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿರಬಹುದು. ಆದರೆ ನಮ್ಮ ಕೆಲಸವನ್ನ ನಾವು ಮುಂದುವರಿಸುತ್ತೇವೆ

ನವದೆಹಲಿ(ಮೇ.23): ಮುಂದಿನ ಲೋಕಸಭೆ ಚುನಾವಣೆಯ ವೇಳೆಗೆ ಪ್ರಧಾನ ನರೇಂದ್ರ ಮೋದಿ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನ ಶಕ್ತಿಯುತವಾಗಿ ಮಾಡುವುದು ನಮ್ಮ ಕೆಲಸ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಪ್ರಾದೇಶಿಕ ಪಕ್ಷಗಳು ಬಲಗೊಂಡರೆ ದೇಶದಲ್ಲಿ ಉತ್ತಮ ಆಡಳಿತ ನೀಡುವ ಸರ್ಕಾರ ರಚಿಸಬಹುದು. ಈ ನಿಟ್ಟಿನಲ್ಲಿ ಚಂದ್ರುಬಾಬು ನಾಯ್ಡು, ನಾನು ಇಂದು ಬೆಂಗಳೂರಿನಲ್ಲಿ ಭೇಟಿ ಆಗಿದ್ದು ಉತ್ತಮ ಚರ್ಚೆಗೆ ಅವಕಾಶ ಮಾಡಿಕೊಟ್ಟಂತಾಯಿತು. ಕಾಂಗ್ರೆಸ್ ಒಂದು ಪ್ರತ್ಯೇಕ ರಾಷ್ಟ್ರೀಯ ಪಕ್ಷವಾಗಿದೆ. ಕಾಂಗ್ರೆಸ್ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಸರ್ಕಾರ ರಚಿಸಲು ಸಹಕಾರ ನೀಡಿದ್ದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಕಾಂಗ್ರೆಸ್ ನ ಕೆಲಸ ಕಾಂಗ್ರೆಸ್ ಮಾಡಲಿದೆ. ನಮ್ಮ ಕೆಲಸ ನಾವು ಮಾಡ್ತಿದ್ದೇವೆ. ಅಮಿತ್ ಶಾ ಏನು ಬೇಕಾದ್ರು ಹೇಳಬಹುದು. ನಾವು ನಮ್ಮ ವಿಚಾರಗಳನ್ನ ಮುಂದಿಟ್ಟಿದ್ದೇವೆ. ನಾವು ಹೆದರು ಪುಕ್ಕಲರಲ್ಲ. ಪ್ರಾದೇಶಿಕ ಪಕ್ಷದ ನಾಯಕರು ಒಂದೆಡೆ ಸೇರಿದಾಕ್ಷಣ ದೇಶದಲ್ಲಿ ತೃತೀಯ ರಂಗದಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿರಬಹುದು. ಆದರೆ ನಮ್ಮ ಕೆಲಸವನ್ನ ನಾವು ಮುಂದುವರಿಸುತ್ತೇವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಾಗಿ ಭರವಸೆ ವ್ಯಕ್ತಪಡಿಸಿದರು.
ಹೆಚ್'ಡಿಕೆಗೆ ಬೆಂಬಲ 
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾತನಾಡಿ, ಕುಮಾರಸ್ವಾಮಿ ಪದಗ್ರಹಣ ಬಹಳ ಸಂತಸ ತಂದಿದೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗಟ್ಟಿನಿಂದ ಕುಮಾರಸ್ವಾಮಿಗೆ ಬೆಂಬಲ ಕೊಡುತ್ತಿದ್ದೇವೆ. ನಮಗೆಲ್ಲಾ ಇದು ಒಗ್ಗಟ್ಟು ಪ್ರದರ್ಶನಕ್ಕೆ ಬಹಳ ಒಳ್ಳೆಯ ವೇದಿಕೆ. ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ನಾನು ಮತ್ತು ಮಮತಾ ಈ ಬಲವರ್ಧನೆಗೆ ಶ್ರಮಿಸುತ್ತಿದ್ದೇವೆ. ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಮುಂದೆ ಹೋಗಬೇಕಿದೆ ಎಂದು ಹೇಳಿದರು. 

loader