ಮದುವೆ ಡ್ರೆಸ್‌ನಲ್ಲಿಯೇ ಬಂದು ಮತದಾನ ಮಾಡಿದ ವಧು

Madikeri bride casts her vote
Highlights

ರಾಜ್ಯದಲ್ಲಿ ಚುನಾವಣಾ  ಕಣ ರಂಗೇರಿಗೆ. ಎಲ್ಲೆಡೆ ಮತದಾರ ಪ್ರಭುಗಳು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ.  ಅದೇ ರೀತಿ ರಾಜ್ಯದದ ನಾನಾ ಕಡೆಗಳಲ್ಲಿ ನವ ವಿವಾಹಿತರೂ ಕೂಡ ತಮ್ಮ ಹಕ್ಕನ್ನು ಚಲಾಯಿಸುವಲ್ಲಿ ಹಿಂದೆ ಬಿದ್ದಿಲ್ಲ. ಮಧುವೆ ಡ್ರೆಸ್‌ನಲ್ಲಿಯೇ ಬಂದು ಮತ ಹಾಕಿದ್ದಾರೆ.

ಮಡಿಕೇರಿ/ಬಾಗಲಕೋಟೆ :  ರಾಜ್ಯದಲ್ಲಿ ಚುನಾವಣಾ  ಕಣ ರಂಗೇರಿಗೆ. ಎಲ್ಲೆಡೆ ಮತದಾರ ಪ್ರಭುಗಳು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ.  ಅದೇ ರೀತಿ ರಾಜ್ಯದ ನಾನಾ ಕಡೆಗಳಲ್ಲಿ ನವ ವಿವಾಹಿತರೂ ಕೂಡ ತಮ್ಮ ಹಕ್ಕನ್ನು ಚಲಾಯಿಸುವಲ್ಲಿ ಹಿಂದೆ ಬಿದ್ದಿಲ್ಲ. 

ಕೊಡಗಿನಲ್ಲಿ ಮದುಮಗಳು ಹಸೆ ಮಣೆ ಏರುವ ಮೊದಲು ಬಂದು ಮತ ಚಲಾಯಿಸಿದ್ದಾರೆ. ಮಡಿಕೇರಿ ತಾಲ್ಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮದುವೆಗಾಗಿ ಅಲಂಕೃತಗೊಂಡಿದ್ದ ವಧು ಐಮಣಿಯಂಡ ಸ್ಮಿತಾ ಮತಚಲಾಯಿಸುವ ಮೂಲಕ ಎಲ್ಲರಿಗೂ ಸಂದೇಶ ನೀಡಿದ್ದಾರೆ. 

ಬಾಗಲಕೋಟೆಯಲ್ಲಿಯೂ ಮದುಮಗಳ ವೋಟಿಂಗ್ 

ಇತ್ತ ಬಾಗಲಕೋಟೆಯಲ್ಲಿಯೂ ಸಹ  ಮದುವೆ ಆದ ಕೆಲವೇ ನಿಮಿಷಗಳಲ್ಲಿ ಮತಗಟ್ಟೆಗೆ ಬಂದು ನವ ವಿವಾಹಿತೆ ಮತದಾನ ಮಾಡಿದ್ದಾರೆ. ಬಾಗಲಕೋಟೆ ನಗರದಲ್ಲಿನ ಮತಗಟ್ಟೆ ಸಂಖ್ಯೆ 134 ರಲ್ಲಿ ನವ ವಿವಾಹಿತೆ ಸೋನಲ್ ರಾಜೇಂದ್ರ ಸೋಮಾನಿ ಮತದಾನ ಮಾಡಿದ್ದಾರೆ.  

ಮದುವೆ ಉಡುಗೆಯಲ್ಲೇ ಮತಗಟ್ಟೆ ಬಂದ ಸೋನಲ್, ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಎಲ್ಲರೂ ದೇಶದ ಅಂಖಡತೆ  ಏಕತೆ ಗಾಗಿ  ಮತದಾನ ಮಾಡಿ ಎಂದು ಈ ವೇಳೆ ಅವರು ಸಂದೇಶ ಸಾರಿದರು.

loader