ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಕೃಷ್ಣ ಬೈರೇಗೌಡ

karnataka-assembly-election-2018 | Saturday, May 5th, 2018
Sujatha NR
Highlights

ಒಕ್ಕಲಿಗರ ಪ್ರಾಬಲ್ಯವಿರುವ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳೂ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೃಷಿ ಸಚಿವ ಕೃಷ್ಣಬೈರೇಗೌಡ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ 5ನೇ ಬಾರಿಗೆ ಶಾಸಕರಾಗಲು ಬಯಸಿ ಪ್ರಚಾರ ನಡೆಸುತ್ತಿದ್ದಾರೆ. 

ಬ್ಯಾಟರಾಯನಪುರ :  ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ 2008ರ ಕ್ಷೇತ್ರ ಪುನರ್ ವಿಂಗಡಣೆಯಿಂದ ಅಸ್ತಿತ್ವಕ್ಕೆ ಬಂತು. ನಗರದ ಜತೆಗೆ ಗ್ರಾಮೀಣ ಪ್ರದೇಶಗಳನ್ನೂ ಒಳಗೊಂಡ ಕ್ಷೇತ್ರದಲ್ಲಿ ಏಳು ಬಿಬಿಎಂಪಿ ವಾರ್ಡುಗಳ ಜತೆಗೆ 5 ಜಿಲ್ಲಾ ಪಂಚಾಯಿತಿ ವಾರ್ಡುಗಳಿವೆ. ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಕೇವಲ 400 ಇದ್ದ ಚ.ಅಡಿ ಇಲ್ಲಿನ ಭೂಮಿ ಬೆಲೆ ಪ್ರಸ್ತುತ 8000 ವರೆಗೂ ಏರಿಕೆಯಾಗಿದೆ. ಇದರಿಂದ ಕ್ಷೇತ್ರ ರಿಯಲ್ ಎಸ್ಟೇಟ್ ಉದ್ಯಮದ ಸ್ವರ್ಗ ಎಂದೇ ಹೆಸರು ಮಾಡಿದೆ.

ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹೊಸ ಹಳ್ಳಿಗಳ ಪೈಕಿ ಬ್ಯಾಟರಾಯನಪುರ ಕ್ಷೇತ್ರದ ಬಹಳಷ್ಟು ಹಳ್ಳಿಗಳೂ ಇವೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳೂ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೃಷಿ ಸಚಿವ ಕೃಷ್ಣಬೈರೇಗೌಡ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ 5ನೇ ಬಾರಿಗೆ ಶಾಸಕರಾಗಲು ಬಯಸಿ ಪ್ರಚಾರ ನಡೆಸುತ್ತಿದ್ದಾರೆ. ಇವರ ವಿರುದ್ಧ ಕಳೆದೆರಡು ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಬಿಜೆಪಿ ಅಭ್ಯರ್ಥಿ ಎ.ರವಿ  ಮೂರನೇ ಬಾರಿಗೆ ಕಣಕ್ಕಿಳಿದಿದ್ದಾರೆ. 

ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇನ್ನು ಜೆಡಿಎಸ್‌ನಿಂದ ಟಿ.ಜಿ.ಚಂದ್ರು (ತಿಂಡ್ಲು ಚಂದ್ರ) ಅವರನ್ನು ಮೊದಲ ಬಾರಿಗೆ ಸ್ಪರ್ಧೆಗಿಳಿಸಲಾಗಿದೆ. ಈ ಮೂವರ ಜತೆಗೆ ಎಂಇಪಿ ಸೇರಿದಂತೆ ವಿವಿಧ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ ಒಟ್ಟು 19 ಜನ ಅಭ್ಯರ್ಥಿಗಳು ಕಣದಲ್ಲಿದಲ್ಲಿದ್ದಾರೆ. ಇಲಾಖೆ ಸಾಧನೆಯೂ ನೆರವಿಗೆ: ಸಚಿವ ಕೃಷ್ಣಬೈರೇಗೌಡ ಕ್ಷೇತ್ರದ ಶಾಸಕರಾಗಿ ಸಾಷಕ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗಾಗಿ ಸರಳ ಮತ್ತು ನೇರ ನುಡಿಯ ವ್ಯಕ್ತಿತ್ವದ ಕೃಷ್ಣ ಬೈರೇಗೌಡ ಅವರು ತಮ್ಮ ಅಭಿ ವೃದ್ಧಿ ಕಾರ್ಯಗಳೇ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂಬ ವಿಶ್ವಾಸದಲ್ಲಿದ್ದಾರೆ. ಇದರ ಜತೆಗೆ, ಬೆಂಗಳೂರು ಶಾಸಕ ರಾಗಿದ್ದರೂ ತಮ್ಮ ಕ್ಷೇತ್ರದ ಶೇ.20 ಕ್ಕೂ ಹೆಚ್ಚು ಪ್ರದೇಶ ಇಂದಿಗೂ ಕೃಷಿ ಭೂಮಿ, ಪಕ್ಕಾ ರೈತರನ್ನು ಒಳಗೊಂಡಿರುವುದ ರಿಂದ ಕೃಷಿ ಇಲಾಖೆಯ ಸಾಧನೆಗಳನ್ನೂ ಹೇಳಿಕೊಳ್ಳ ಲು ಅವಕಾಶವಿದೆ.

ಬಿಜೆಪಿ ಅಭ್ಯರ್ಥಿ ಎ.ರವಿ ಎರಡು ಬಾರಿ ಸೋತ ರೂ ಪಕ್ಷ ಬಿಟ್ಟು ಹೋಗದೆ, ಕ್ಷೇತ್ರದಲ್ಲಿ ನಿರಂತರ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಇದು ಅವರಿಗೆ ಚುನಾವ ಣೆಯಲ್ಲಿ ಲಾಭ ತರಬಹುದಾಗಿದೆ. ಬಿಜೆಪಿಯಿಂದ ಚಕ್ರಪಾಣಿ ಸೇರಿದಂತೆ ಮತ್ತಿತರ ಆಕಾಂಕ್ಷಿಗಳಿದ್ದರೂ ಅವರಿಂದ ಯಾವುದೇ ಬಂಡಾಯ ಉಂಟಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು, ಜತೆಗೆ ಸತತ ಸೋಲುಂಡಿರುವ ಅವರು ಅನುಕಂಪದ ಅಲೆಯ ನಿರೀಕ್ಷೆಯಲ್ಲಿದ್ದಾರೆ. ಜೆಡಿಎಸ್ ನ ಟಿ.ಜಿ.ಚಂದ್ರು, ಮೂಲತಃ ಉದ್ಯಮಿ, ಆರ್ಥಿಕವಾಗಿ ಸಬಲರಾಗಿದ್ದಾರೆ. ಜೆಡಿಎಸ್ ಎಲ್ಲ ಪಕ್ಷಗಳಿಗೂ ಮೊದಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದರಿಂದ ಕ್ಷೇತ್ರದಾದ್ಯಂತ ಪ್ರಚಾರ ಇತರರಿಗಿಂತ ಬೇಗ ಆರಂಭಿಸಿದ್ದರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR