ಕೊಪ್ಪಳ (ಏ. 26):  ಪುನರ್ವಸತಿ ಕಲ್ಪಿಸದ ಹಿನ್ನಲೆಯಲ್ಲಿ  ಗಂಗಾವತಿ ತಾಲೂಕಿನ ವಿರುಪಾಪೂರ ಗಡ್ಡೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಎಚ್ಚರಿಕೆ ನೀಡಿದ್ದಾರೆ. 

ಎರಡು ವರ್ಷಗಳ ಹಿಂದೆ ವಿರುಪಾಪೂರ ಗಡ್ಡೆಯಲ್ಲಿ ಮನೆಗಳ ತೆರವು ಮಾಡಲಾಗಿತ್ತು. ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಮನೆಗಳ ನಿರ್ಮಾಣ ಹಿನ್ನಲೆ ತೆರವು ಮಾಡಲಾಗಿತ್ತು. ತೆರವು ಮಾಡಿದ ಬಳಿಕ ಗ್ರಾಮಸ್ಥರು ಹೋರಾಟ ಮಾಡಿದ್ರು. ಜಿಲ್ಲಾಡಳಿತ ಬೇರೆ ಕಡೆ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿತ್ತು.  ಎರಡು ವರ್ಷ ಕಳೆದರೂ ಭರವಸೆ  ಈಡೇರದ ಹಿನ್ನಲೆಯಲ್ಲಿ ಮತದಾನ ಬಹಿಷ್ಕಾರ ಹಾಕಿದ್ದಾರೆ. 

ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕೂಡಾ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಿಸದ ಹಿನ್ನಲೆಯಲ್ಲಿ ಸುಮಾರು 400 ಮತದಾರರು ಮತದಾನ ಬಹಿಷ್ಕಾರ ಎಚ್ಚರಿಕೆ ನೀಡಿದ್ದಾರೆ.  ಎರಡು ವರ್ಷಗಳಿಂದ ಮೂಲ ಸೌಕರ್ಯವಿಲ್ಲದೆ ಜನ ಪರದಾಡುತ್ತಿದ್ದಾರೆ.