ಕೊಪ್ಪಳ ಜಿಲ್ಲೆಯಲ್ಲಿ 5 ವಿಧಾನಸಭೆ ಕ್ಷೇತ್ರಗಳು ಕುಷ್ಟಗಿ, ಕನಕಗಿರಿ, ಕೊಪ್ಪಳ, ಗಂಗಾವತಿ ಮತ್ತು ಯಲಬುರ್ಗಾ ಮೂರು ಕ್ಷೇತ್ರದಲ್ಲಿ ಕಮಲ ಅರಳಿದರೆ ಎರಡು ಕೈ ಪಾಲಿಗೆ
ಬೆಂಗಳೂರು [ಮೇ. 15]: 15ನೇ ವಿಧಾನಸಭೆಯ ಚುನಾವಣಾ ಫಲಿತಾಂಶಗಳು ಮಂಗಳವಾರ ಪ್ರಕಟವಾಗಿದ್ದು, ಕೊಪ್ಪಳದಲ್ಲಿ ಬಿಜೆಪಿಯು ಕೈ ಪಾಳೆಯಕ್ಕೆ ಶಾಕ್ ನೀಡಿದೆ. ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯು 3 ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದ ಗಂಗಾವತಿಯ ಪ್ರಭಾವಿ ಶಾಸಕ ಇಕ್ಬಾಲ್ ಅನ್ಸಾರಿಯನ್ನು ಬಿಜೆಪಿಯ ಈಶ್ವರಪ್ಪ ಮುನವಳ್ಳಿ ಸೋಲಿನ ರುಚಿ ತೋರಿಸಿದ್ದಾರೆ. ಸುಮಾರು 7973 ವೋಟುಗಳ ಅಂತರದಿಂದ ಇಕ್ಬಾಲ್ ಅನ್ಸಾರಿ ಪರಾಭವಗೊಂಡಿದ್ದಾರೆ. 2013ರಲ್ಲಿ ನಡೆದ ವಿದಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 3, ಹಾಗೂ ಜೆಡಿಎಸ್ ಮತ್ತು ಬಿಜೆಪಿ ತಲಾ 1 ಸ್ಥಾನಗಳನ್ನು ಗಳಿಸಿತ್ತು.
| ಕ್ಷೇತ್ರ | ಗೆಲುವು | ಪಕ್ಷ | ಮತಗಳು | ಸೋಲು | ಪಕ್ಷ | ಮತಗಳು | ಅಂತರ |
| ಕುಷ್ಟಗಿ | ಅಮರೇಗೌಡ ಬಯ್ಯಾಪುರ | ಕಾಂಗ್ರೆಸ್ | 87566 | ದೊಡ್ಡಣಗೌಡ ಪಾಟೀಲ್ | ಬಿಜೆಪಿ | 69535 | 18031 |
| ಕನಕಗಿರಿ | ಬಸವರಾಜ್ ದಾದೆಸುಗುರ್ | ಬಿಜೆಪಿ | 87735 | ಶಿವರಾಜ್ ತಂಗಡಗಿ | ಕಾಂಗ್ರೆಸ್ | 73510 | 14225 |
| ಗಂಗಾವತಿ | ಪರಣ ಈಶ್ವರಪ್ಪ ಮುನವಳ್ಳಿ | ಬಿಜೆಪಿ | 67617 | ಇಕ್ಬಾಲ್ ಅನ್ಸಾರಿ | ಕಾಂಗ್ರೆಸ್ | 59644 | 7973 |
| ಯಲಬುರ್ಗಾ | ಆಚಾರ್ ಹಾಲಪ್ಪ ಬಸಪ್ಪ | ಬಿಜೆಪಿ | 79072 | ಬಸವರಾಜ್ ರಾಯರೆಡ್ಡಿ | ಕಾಂಗ್ರೆಸ್ | 65754 | 13318 |
| ಕೊಪ್ಪಳ | ಬಸವರಾಜ್ ಹಿತ್ನಾಳ್ | ಕಾಂಗ್ರೆಸ್ | 98783 | ಅಮರೇಶ್ ಸಂಗಣ್ಣ ಕರಡಿ | ಬಿಜೆಪಿ | 72432 | 26531 |
ಈ ಬಾರಿ ಬಹಳ ಪ್ರಯಾಸಪಟ್ಟು ಟಿಕೆಟ್ ಗಿಟ್ಟಿಸಿದ್ದ ಕರಡಿ ಸಂಗಣ್ಣ ಪುತ್ರ, ಬಿಜೆಪಿ ಅಭ್ಯರ್ಥಿ ಅಮರೇಶ್‌ನ್ನು ಬಸವರಾಜ್ ಹಿತ್ನಾಳ್ 26 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ 76.12 ಶೇ. ಮತದಾನವಾಗಿದೆ.
