ತಂದೆ - ತಾಯಿ ಸಾವಿನ ನಡುವೆ ಬಂದು ತಮ್ಮ ಹಕ್ಕು ಚಲಾಯಿಸಿದರು

kins cast their votes amidst parents death
Highlights

ಕರ್ನಾಟಕಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯವಾಗಲು ಇನ್ನೊಂದು ಗಂಟೆ ಮಾತ್ರವೇ  ಬಾಕಿ ಇದೆ. ಮತದಾರರು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇತ್ತ ಯಾದಗಿರಿ ಹಾಗೂ ಬೀದರ್ ನಲ್ಲಿ ತಂದೆ ತಾಯಿ ಸಾವಿನ ನಡುವೆ ಕುಟುಂಬಸ್ಥರು ಬಂದು ಮತ ಹಾಕಿದ್ದಾರೆ. 

ಯಾದಗಿರಿ /ಬೀದರ್ :  ಕರ್ನಾಟಕಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯವಾಗಲು ಇನ್ನೊಂದು ಗಂಟೆ ಮಾತ್ರವೇ  ಬಾಕಿ ಇದೆ. ಮತದಾರರು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. 

ಯಾದಗಿರಿಯಲ್ಲಿ ಮನೆಯಲ್ಲಿ ಮೃತದೇಹ ಇದ್ದರೂ ಕುಟುಂಬವೊಂದು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದೆ.  ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಘಟನೆ ನಡೆದಿದೆ. ಈ ಗ್ರಾಮವು ಶಹಾಪೂರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ. 

ಮನೆಯಲ್ಲಿ ತಾಯಿಯ ಮೃತದೇಹ ಇದ್ದರೂ, ಸೂತಕದ ನಡುವೆ ಕುಟುಂಬ ಸದಸ್ಯರು ಮತಗಟ್ಟೆಗೆ ಬಂದು ಮತ ಹಾಕಿದ್ದಾರೆ. 

ಮನೆಯಲ್ಲಿ ಶವವಿದ್ದರೂ ಮತದಾನ : ಇತ್ತ ಬೀದರ್ ನಲ್ಲಿ  ತಂದೆಯ  ಶವ ಮನೆಯಲ್ಲಿದ್ದರೂ ಕೂಡ ಪುತ್ರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.  

ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದ ರಾಜಕುಮಾರ ಸ್ವಾಮಿ ಎಂಬುವವರು, ತಂದೆ ಬಸಯ್ಯಾ ಸ್ವಾಮಿ (60) ನಿಧನ ಹೊಂದಿದ್ದರು ಅದರ ನಡುವೆಯೇ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 

loader