ಸೋಮಶೇಖರ್ ರೆಡ್ಡಿ ಕೂಡ ಕ್ಷೇತ್ರಕ್ಕೆ ಒಳ್ಳೆಯದು ಮಾಡ್ತಿದ್ದಾರೆ. ನಟ ಸುದೀಪ್ ನೋಡಲು ಅಭಿಮಾನಿಗಳು ಮುಗಿಬಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿನಿಮಾ ನಟರ ಪ್ರಚಾರ ರಂಗೇರಿದ್ದು ನಟ ಯಶ್ ಕೂಡ ರೆಡ್ಡಿ ಸಹೋದರರ ಪರ ಬಳ್ಳಾರಿ, ಮೈಸೂರಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಿದ್ದರು. ದರ್ಶನ್ ಕೂಡ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಕೈಗೊಂಡಿದ್ದರು.

ಬಳ್ಳಾರಿ(ಮೇ.07): ಶ್ರೀರಾಮುಲು ನನ್ನ ಸಹೋದರ, ನಮ್ಮಿಬ್ಬರದು ಹಳೆ ಪರಿಚಯ. ನಾನು ಸಿನಿಮಾ ಪಕ್ಷದವನು, ನಿಮ್ಮ ಪ್ರೀತಿ ನನ್ನ ಮೇಲೆ ಇರಲಿ ಎಂದು ನಟ ಸುದೀಪ್ ಹೇಳಿದ್ದಾರೆ.
ಬಳ್ಳಾರಿಯ ಸಂಡೂರು, ಮೊಳಕಾಲ್ಮೂರಿನಲ್ಲಿ ಪ್ರಚಾರ ನಡೆಸಿದ ಅವರು,ಎಲ್ಲರೂ ಚೆನ್ನಾಗಿದ್ದಿರಾ..? ಎಂದು ಮಾತು ಆರಂಭಿಸಿ ಇಷ್ಟು ವರ್ಷ ಕೈ ಹಿಡಿದು ಬೆಳೆಸಿದ್ದಕ್ಕೆ ಧನ್ಯವಾದಗಳು. ಸೋಮಶೇಖರ್ ರೆಡ್ಡಿ ಕೂಡ ಕ್ಷೇತ್ರಕ್ಕೆ ಒಳ್ಳೆಯದು ಮಾಡ್ತಿದ್ದಾರೆ. ನಟ ಸುದೀಪ್ ನೋಡಲು ಅಭಿಮಾನಿಗಳು ಮುಗಿಬಿದ್ದರು. 
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿನಿಮಾ ನಟರ ಪ್ರಚಾರ ರಂಗೇರಿದ್ದು ನಟ ಯಶ್ ಕೂಡ ರೆಡ್ಡಿ ಸಹೋದರರ ಪರ ಬಳ್ಳಾರಿ, ಮೈಸೂರಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಿದ್ದರು. ದರ್ಶನ್ ಕೂಡ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಕೈಗೊಂಡಿದ್ದರು.