ಕೆ.ಜಿ.ಬೋಪಯ್ಯ ಹಂಗಾಮಿ ಸ್ಪೀಕರ್

KG Bopaiah Elected new Acting Speaker
Highlights

ಸ್ಪೀಕರ್ ಆಯ್ಕೆ ನೂತನ ಸರ್ಕಾರದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ನಾಳೆ ಸ್ಪೀಕರ್ ಆಯ್ಕೆಯ ಅಂತಿಮ ಚಿತ್ರಣ ಗೊತ್ತಾಗಲಿದೆ. ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಹಾಗೂ ಇತರರು ಇಬ್ಬರು ಜಯಗಳಿಸಿದ್ದಾರೆ. ಬಹುಮತಕ್ಕೆ 111 ಸ್ಥಾನ ಸಿಗಬೇಕಿದೆ. 

ಬೆಂಗಳೂರು(ಮೇ.18): ಬಿಜೆಪಿಯ ಹಿರಿಯ ನಾಯಕ ಕೆ.ಜಿ.ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿದ್ದಾರೆ.  
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೋಪಯ್ಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ನಾಳೆ ಸಂಜೆ 4 ಗಂಟೆಗೆ  ಬಹುಮತ ಸಬೀತುಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪ್ರಿಂ ಕೋರ್ಟ್ ಆದೇಶಿಸಿದ ಹಿನ್ನಲೆಯಲ್ಲಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ಬಿಎಸ್ ಯಡಿಯೂರಪ್ಪ  ನಾಳೆ ಅಗ್ನಿ ಪರೀಕ್ಷೆ ಎದುರಿಸಬೇಕಿದೆ. 
ಸ್ಪೀಕರ್ ಆಯ್ಕೆ ನೂತನ ಸರ್ಕಾರದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ನಾಳೆ ಸ್ಪೀಕರ್ ಆಯ್ಕೆಯ ಅಂತಿಮ ಚಿತ್ರಣ ಗೊತ್ತಾಗಲಿದೆ. ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಹಾಗೂ ಇತರರು ಇಬ್ಬರು ಜಯಗಳಿಸಿದ್ದಾರೆ. ಬಹುಮತಕ್ಕೆ 111 ಸ್ಥಾನ ಸಿಗಬೇಕಿದೆ. 

ಸ್ಪೀಕರ್ ನೇಮಕಕ್ಕೆ ಇರಬೇಕಾದ ಅರ್ಹತೆಗಳು
1. ಭಾರತ ದೇಶದ ಪ್ರಜೆಯಾಗಿರಬೇಕು.
2.25  ವರ್ಷದವರಿಗಿಂತ ಮೇಲ್ಪಟ್ಟವರಾಗಿರಬೇಕು
3. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಹುದ್ದೆಯಲ್ಲಿರಬಾರದು
4. ಹಿರಿಯ ಶಾಸಕನಾಗಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರಬೇಕು

loader