ಹೇಗೆ ಸಾಗಿದೆ ಮತದಾನ? ಮತದಾರ ಪ್ರಭುವಿನ ಚಿತ್ತ ಯಾರತ್ತ?

Karnataka Polling here is the analysis
Highlights

ರಾಜ್ಯಾದ್ಯಂತ ಬಿರುಸಿನಿಂದ ಮತದಾನ ನಡೆಯುತ್ತಿದೆ. ಜನರು ಬಿರು ಬಿಸಿಲನ್ನು ಲೆಕ್ಕಿಸದೇ ಮತಗಟ್ಟೆಗೆ ಬಂದು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದುವರೆಗಿನ ಅಪ್’ಡೇಟ್ ಪ್ರಕಾರ ಶೇ. 26 ರಷ್ಟು ಮತದಾನವಾಗಿದೆ.

ಬೆಂಗಳೂರು (ಮೇ. 12): ರಾಜ್ಯಾದ್ಯಂತ ಬಿರುಸಿನಿಂದ ಮತದಾನ ನಡೆಯುತ್ತಿದೆ. ಜನರು ಬಿರು ಬಿಸಿಲನ್ನು ಲೆಕ್ಕಿಸದೇ ಮತಗಟ್ಟೆಗೆ ಬಂದು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದುವರೆಗಿನ ಅಪ್’ಡೇಟ್ ಪ್ರಕಾರ ಶೇ. 26 ರಷ್ಟು ಮತದಾನವಾಗಿದೆ.

ಶೇ. 68 ಕ್ಕಿಂತ ಜಾಸ್ತಿ ಮತದಾನವಾದರೆ ಇದು ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿ ಇದೆ ಎಂಬುದನ್ನು ತೋರಿಸಲಿದ್ದು ಸರ್ಕಾರ ಬದಲಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ಆದರೆ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಇದಮಿತ್ಥಂ ಎಂದು ಹೇಳಲು ಕಷ್ಟಸಾಧ್ಯ. ಶೇ. 60 ಕ್ಕಿಂತ ಜಾಸ್ತಿ ಮತದಾನವಾದಾಗಲೂ ಸರ್ಕಾರ ಬದಲಾದ ಇತಿಹಾಸ ಕರ್ನಾಟಕದಲ್ಲಿದೆ. 

ದಕ್ಷಿಣ ಕನ್ನಡ, ಉಡುಪಿ, ಹಾಗೂ ಹಳೆ ಮೈಸೂರು ಭಾಗಗಳಲ್ಲಿ ಮತದಾನ ಪ್ರಮಾಣ ಹೆಚ್ಚಿರುತ್ತದೆ.  ಈ ಭಾಗಗಳಲ್ಲಿ ಧರ್ಮದ ಆಧಾರದ ಮೇಲೆ ಮತಗಳು ನಿರ್ಣಯವಾದರೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜಾತಿಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಇನ್ನು ಮತದಾನದ ಪ್ರಮಾಣ ನೋಡಿದರೆ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲೇ ಹೆಚ್ಚಾಗಿರುತ್ತದೆ.ಈ ಬಾರಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಂಜೆ 5 ಗಂಟೆಗೆ ಇದರ ಸಂಪೂರ್ಣ ಚಿತ್ರಣ ಸಿಗುತ್ತದೆ. 

ಇಡೀ ದಿನದ ಸಂಪೂರ್ಣ ಚಿತ್ರಣವನ್ನು ನಿಮ್ಮ ಸುವರ್ಣ ನ್ಯೂಸ್  ನೀಡುತ್ತದೆ. ಸಂಜೆ 5 ಗಂಟೆಯಿಂದ ರಾಜಕೀಯ ತಜ್ಞರಿಂದ ವಿಶ್ಲೇಷಣೆ, ಎಕ್ಸಿಟ್ ಪೋಲ್, ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದಿಡುತ್ತದೆ. 

loader