ಮತದಾನದಲ್ಲೂ ದಕ್ಷಿಣ ಕನ್ನಡ ಮುಂದೆ

Karnataka Polling Dakshina Kannada Aheading in Voting Till 1 pm
Highlights

ಒಂದು ಗಂಟೆಯ ವೇಳೆಗೆ ರಾಜ್ಯದಾದ್ಯಂತ ಒಟ್ಟಾರೆ 36.9% ರಷ್ಟು ಮತದಾನವಾಗಿದೆ. ಇನ್ನು ಜಿಲ್ಲಾವಾರು ವಿಭಾಗದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಶೇ.47% ಮತದಾನವಾಗುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ 28%ರಷ್ಟು ಮಾತ್ರ ಮತದಾನವಾಗಿದ್ದು ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರು(ಮೇ.12): ಕರ್ನಾಟಕ ರಾಜ್ಯದಾದ್ಯಂತ ಚುರುಕಿನ ಮತದಾನ ನಡೆಯುತ್ತಿದ್ದು, ಮತದಾನದಲ್ಲೂ ದಕ್ಷಿಣ ಕನ್ನಡ ಮುನ್ನಡೆ ಸಾಧಿಸಿದೆ. ಎಸ್ಎಸ್ಎಲ್’ಸಿ-ಪಿಯುಸಿ ಪರೀಕ್ಷೆಗಳಲ್ಲಿ ಮುನ್ನಡೆ ಸಾಧಿಸುವ ಉಡುಪಿ ಹಾಗೂ ದಕ್ಷಿಣಕನ್ನಡ ಮತದಾನದಲ್ಲೂ ಮುನ್ನಡೆ ಸಾಧಿಸುವ ಲಕ್ಷಣಗಳು ಗೋಚರಿಸುತ್ತವೆ.
ಒಂದು ಗಂಟೆಯ ವೇಳೆಗೆ ರಾಜ್ಯದಾದ್ಯಂತ ಒಟ್ಟಾರೆ 36.9% ರಷ್ಟು ಮತದಾನವಾಗಿದೆ. ಇನ್ನು ಜಿಲ್ಲಾವಾರು ವಿಭಾಗದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಶೇ.47% ಮತದಾನವಾಗುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ 28%ರಷ್ಟು ಮಾತ್ರ ಮತದಾನವಾಗಿದ್ದು ಕೊನೆಯ ಸ್ಥಾನದಲ್ಲಿದೆ. ಉಳಿದಂತೆ ಕೊಡಗು, ಚಾಮರಾಜನಗರ, ರಾಮನಗರಗಳಲ್ಲಿ ಶೇ.45% ಮತದಾನವಾಗಿದೆ.
ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

 

loader