ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಹಂಚಿಕೊಳ್ಳಲು ಕಾಂಗ್ರೆಸ್ ಬಯಕೆ

Karnataka  Govt : What Is The Next Plan Of Conggress
Highlights

ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕುಮಾರ ಸ್ವಾಮಿ 5 ವರ್ಷ ಮುಖ್ಯಮಂತ್ರಿ ಎಂಬ ಸೂತ್ರದಿಂದ ಕಾಂಗ್ರೆಸ್ ಹಿಂದೆ ಸರಿದಿದ್ದು, ತಲಾ ಎರಡೂ ವರೆ ವರ್ಷಗಳ ಕಾಲ ಮುಖ್ಯ ಮಂತ್ರಿ ಹುದ್ದೆಯನ್ನು ಉಭಯ ಪಕ್ಷಗಳು ಹಂಚಿಕೊಳ್ಳುವ ಹೊಸ ಸೂತ್ರವನ್ನು ಮೈತ್ರಿ ಪಕ್ಷ ಜೆಡಿಎಸ್‌ನ ಮುಂದಿಡಲಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕುಮಾರ ಸ್ವಾಮಿ 5 ವರ್ಷ ಮುಖ್ಯಮಂತ್ರಿ ಎಂಬ ಸೂತ್ರದಿಂದ ಕಾಂಗ್ರೆಸ್ ಹಿಂದೆ ಸರಿದಿದ್ದು, ತಲಾ ಎರಡೂ ವರೆ ವರ್ಷಗಳ ಕಾಲ ಮುಖ್ಯ ಮಂತ್ರಿ ಹುದ್ದೆಯನ್ನು ಉಭಯ ಪಕ್ಷಗಳು ಹಂಚಿಕೊಳ್ಳುವ ಹೊಸ ಸೂತ್ರವನ್ನು ಮೈತ್ರಿ ಪಕ್ಷ ಜೆಡಿಎಸ್‌ನ ಮುಂದಿಡಲಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಕನ್ನಡಪ್ರಭಕ್ಕೆ ಈ ಮಾಹಿತಿ ನೀಡಿದ ಉನ್ನತ ನಾಯಕರೊ ಬ್ಬರು, ಕುಮಾರಸ್ವಾಮಿ ಅವರಿಗೆ 5 ವರ್ಷ ಮುಖ್ಯಮಂತ್ರಿ ಹುದ್ದೆ ನೀಡುವ ಚರ್ಚೆಯೇ ನಡೆ ದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಮೊದಲು ಮುಖ್ಯಮಂತ್ರಿ ಹುದ್ದೆ ಕುಮಾರಸ್ವಾಮಿ ಅವರಿಗೆ ಎಂಬುದಕ್ಕೆ ಮಾತ್ರ  ಒಪ್ಪಿಕೊಳ್ಳಲಾಗಿತ್ತು. ಉಳಿದ ವಿಚಾರಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಿರ್ಧ ರಿಸಲು ತೀರ್ಮಾನವಾಗಿತ್ತು ಎಂದು ಅವರು ಹೇಳಿದ್ದಾರೆ. 

ಸಂಖ್ಯಾಬಲದಲ್ಲಿ ಜೆಡಿಎಸ್‌ಗಿಂತ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಕೋಮುವಾದಿ ಶಕ್ತಿಗಳನ್ನು ದೂರವಿಡ ಬೇಕು ಎಂಬ ಕಾರಣಕ್ಕೆ  ಜೆಡಿಎಸ್‌ಗೆ ಮೊದಲ ಅವಧಿಗೆ ಸಿಎಂ ಹುದ್ದೆ ನೀಡಲು ಒಪ್ಪಿದೆ. ಆದರೆ, ಅದು ಪರಿ ಪೂರ್ಣ 5 ವರ್ಷಗಳಿಗೆ  ಎಂದೇನೂ ಚರ್ಚೆ ವೇಳೆ ಬಂದಿ ರಲಿಲ್ಲ. ಸಹಜವಾಗಿಯೇ ಕಾಂಗ್ರೆಸ್ 2 ನೇ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಯಸುತ್ತದೆ. 

ಜೆಡಿಎಸ್ ನಾಯಕರೊಂದಿಗೆ ಮುಂದಿನ ಹಂತದ ಚರ್ಚೆ ವೇಳೆ ಈ ವಿಚಾರ ಪ್ರಸ್ತಾಪವಾಗಲಿದ್ದು, ಕಾಂಗ್ರೆಸ್-ಜೆಡಿಎಸ್ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆ ಪಡೆ ಯುವ ಬಗ್ಗೆ ಕಾಂಗ್ರೆಸ್ ಪ್ರಸ್ತಾಪ ಮಂಡಿಸಲಿದೆ ಎಂದರು.  ಅಲ್ಲದೆ, ಸಚಿವ ಸ್ಥಾನ, ನಿಗಮ ಮಂಡಳಿ ಸೇರಿದಂತೆ ಪ್ರತಿಯೊಂದು ಅಧಿಕಾರ ಹಂಚಿಕೆಯೂ ಎರಡು ಪಕ್ಷಗಳು ಹೊಂದಿರುವ ಶಾಸಕ ಸ್ಥಾನಕ್ಕೆ ಸಂವಾದಿಯಾಗಿ ಇರುತ್ತದೆ.

ಕಾಂಗ್ರೆಸ್ 78  ಶಾಸಕರನ್ನು ಹೊಂದಿದ್ದೂ ತಲಾ ನಾಲ್ಕು ಶಾಸಕರಿಗೆ ಒಬ್ಬರಂತೆ ಸಚಿವ ಸ್ಥಾನವನ್ನು ಪಡೆಯಲಿದೆ. ಈ ಲೆಕ್ಕಾಚಾರದಂತೆ ಕಾಂಗ್ರೆಸ್ 20 ಸಚಿವ ಸ್ಥಾನವನ್ನು ಪಡೆಯಬೇಕಾಗುತ್ತದೆ. ಇದೇ ಲೆಕ್ಕಾಚಾರ ನಿಗಮ ಮಂಡಳಿ ಹಾಗೂ ಇತರೆ ಹುದ್ದೆಗಳಿಗೆ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.

ಆದರೆ, ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂಬ ಚರ್ಚೆಗಳು ಇನ್ನೂ ಆರಂಭವೇ ಆಗಿಲ್ಲ. ಈ ಬಗ್ಗೆ ಪಕ್ಷದ ನಾಯಕರು ಸಭೆ ಸೇರಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಏನು ಲೆಕ್ಕಾಚಾರ..?

ಜೆಡಿಎಸ್‌ಗೆ 5 ವರ್ಷದ
ಪೂರ್ಣಾವಧಿಗೆ
ಮುಖ್ಯಮಂತ್ರಿ ಹುದ್ದೆಯನ್ನು
ಬಿಟ್ಟುಕೊಡುವ ಸಾಧ್ಯತೆ ಇಲ್ಲ


ಅಧಿಕಾರವನ್ನು ತಲಾ 30
ತಿಂಗಳ ಕಾಲ ಹಂಚಿಕೊಳ್ಳುವ
ಚಿಂತನೆ: ಶೀಘ್ರ ಜೆಡಿಎಸ್‌ಗೆ
ಪ್ರಸ್ತಾಪ ಸಾಧ್ಯತೆ


ಶಾಸಕರ ಸಂಖ್ಯೆಗೆ ಅನುಗುಣ
ವಾಗಿ ಸಚಿವ ಸ್ಥಾನ, ನಿಗಮ-
ಮಂಡಳಿ ಸೇರಿ ವಿವಿಧ
ಅಧಿಕಾರ ಹಂಚಿಕೆ


ಈ ಸೂತ್ರದ ಪ್ರಕಾರ ಸಿಎಂ
ಅಲ್ಲದೆ ಜೆಡಿಎಸ್,
ಪಕ್ಷೇತರರಿಗೆ ಒಟ್ಟು 13
ಕಾಂಗ್ರೆಸ್‌ಗೆ 20 ಸಚಿವ ಸ್ಥಾನ

loader