ಜೆಡಿ ಎಸ್ ಅಬ್ಬರದಲ್ಲಿ ಡಲ್ ಆಗಿದ್ದ ಕಾಂಗ್ರೆಸ್

karnataka-assembly-election-2018 | Thursday, May 24th, 2018
Suvarna Web Desk
Highlights

ಹನ್ನೆರಡು ವರ್ಷಗಳ ಬಳಿಕ ರಾಜ್ಯಾಡಳಿತವನ್ನು ಹಿಡಿದ ಸಂಭ್ರಮದಲ್ಲಿ ಜೆಡಿಎಸ್ ನಾಯಕರು ಹಾಗೂ ಕಾರ್ಯ ಕರ್ತರು ಮುಳುಗಿದ್ದರೆ, ದಳಪತಿಗಳ ಈ ಅಬ್ಬರದಲ್ಲಿ ಕಾಂಗ್ರೆಸ್ಸಿಗರು ಅಕ್ಷರಶಃ ಮಂಕಾದಂತೆ ಕಂಡುಬಂದರು.

ಬೆಂಗಳೂರು: ಹನ್ನೆರಡು ವರ್ಷಗಳ ಬಳಿಕ ರಾಜ್ಯಾಡಳಿತವನ್ನು ಹಿಡಿದ ಸಂಭ್ರಮದಲ್ಲಿ ಜೆಡಿಎಸ್ ನಾಯಕರು ಹಾಗೂ ಕಾರ್ಯ ಕರ್ತರು ಮುಳುಗಿದ್ದರೆ, ದಳಪತಿಗಳ ಈ ಅಬ್ಬರದಲ್ಲಿ ಕಾಂಗ್ರೆಸ್ಸಿಗರು ಅಕ್ಷರಶಃ ಮಂಕಾದಂತೆ ಕಂಡುಬಂದರು. ಜೆಡಿಎಸ್‌ಗೆ ಶಕ್ತಿ ತುಂಬಲು ಆಗಮಿಸಿದ್ದ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ತೃತೀಯ ರಂಗ ರಚಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಪ್ರಮಾಣ ವಚನದ ವೇದಿಕೆಯಲ್ಲಿ ಖುದ್ದು ಜೆಡಿಎಸ್ ವರಿಷ್ಠ ಎಚ್ .ಡಿ.ದೇವೇಗೌಡರೇ ಮುಂದೆ ನಿಂತು ಸ್ವಾಗತಿಸಿದರು. 

ಪದ ಗ್ರಹಣ  ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಾದಿ ಬೀದಿಗಳು ಹಾಗೂ ವಿಧಾನಸೌಧ ಸುತ್ತಮುತ್ತ ಜೆಡಿಎಸ್ ಪಕ್ಷಕ್ಕೆ ಶುಭ ಕೋರುವ ಫ್ಲೆಕ್ಸ್‌ಗಳು ರಾರಾಜಿಸಿದರೆ, ಕಾರ್ಯಕ್ರಮಕ್ಕೆ ಪಕ್ಷದ ಭದ್ರ ಕೋಟೆ ಯಾದ ಹಳೆ ಮೈಸೂರು ಸೇರಿದಂತೆ ರಾಜ್ಯ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರು. ವಿಧಾನಸೌಧದ ಮುಂಭಾಗದಲ್ಲಿ ನಡೆದ ಅದ್ಧೂರಿ ಪ್ರಮಾಣ ವಚನ ಕಾರ್ಯಕ್ರಮದ ವೇದಿಕೆಗೆ ಎಚ್.ಡಿ.ದೇವೇಗೌಡ ಅವರು ತಮ್ಮ ಪತ್ನಿ ಚನ್ನಮ್ಮ ಹಾಗೂ ಮೊಮ್ಮಗ ಪ್ರಜ್ವಲ್ ಜೊತೆಗೂಡಿ ಆಗಮಿಸಿದರು. 

ಅವರು ವೇದಿಕೆ ಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ರಣೋತ್ಸಾಹದಲ್ಲಿ ಜೆಡಿಎಸ್ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ತಟ್ಟಿ ಜೈಕಾರ ಕೂಗಿದರು. ಇದಾದ ಬಳಿಕ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಜತೆ ಶ್ವೇತವಸ್ತ್ರಧಾರಿಯಾಗಿ ವೇದಿಕೆಗೆ ಆಗಮಿಸಿದ  ಎಚ್.ಡಿ.ಕುಮಾರಸ್ವಾಮಿ ಅವರನ್ನು ನೋಡಿದ ಕೂಡಲೇ ಜೆಡಿಎಸ್ ಕಾರ್ಯಕರ್ತರ ಹಷೋದ್ಗಾರ ಮುಗಿಲು ಮುಟ್ಟಿತು. ಇದೇ ವೇಳೆ ವೇದಿಕೆಗೆ ಬಂದ ಪರಮೇಶ್ವರ್ ಅವರಿಗೆ ಜೈಕಾರ-ಶಿಳ್ಳೆಗಳು ಕೇಳಿ ಬಂದರೂ ದಳಪತಿಗಳಿಗೆ ಸಿಕ್ಕ ಅಬ್ಬರದ ಸ್ವಾಗತ ಇರಲಿಲ್ಲ. 
 
ಈ ಜೈಕಾರದ ಸುರಿಮಳೆಗೆ ಉತ್ಸಾಹಭರಿತ ರಾದ ದೇವೇಗೌಡರು, ವೇದಿಕೆ ಮುಂಭಾಗಕ್ಕೆ ಬಂದು ಕೈಮುಗಿದು ಕಾರ್ಯಕರ್ತರಿಗೆ ನಮಸ್ಕರಿಸಿದರು. ಬಳಿಕ ತೃತೀಯ ರಂಗದ ನಾಯ ಕರು ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸಹ ವೇದಿಕೆಗೆ ಬಂದರು. ಆದರೆ ಕಾಂಗ್ರೆಸ್ ಕಾರ್ಯ ಕರ್ತರ ಕರತಾಡನ ಹೆಚ್ಚಿನ ಸದ್ದು ಮಾಡಲಿಲ್ಲ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಯೂ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹದ ಅಬ್ಬರ ಕಂಡುಬರಲಿಲ್ಲ.

ಒಂದೆಡೆ ಮಳೆಯನ್ನೂ ಲೆಕ್ಕಿಸದೆ ಬಂದ ಜನರು ನಾಯಕ ಗಣವನ್ನು ಕಂಡು ಉತ್ಸಾಹಗೊಂಡ ದೇವೇಗೌಡರು, ಸಹಾಯಕರನ್ನು ದೂರವಿಟ್ಟು ಬಿರುಸಾಗಿ ವೇದಿಕೆಯಲ್ಲಿ ಓಡಾಡಿದರು. ಆದರೆ ಕಾಂಗ್ರೆಸ್ಸಿಗರು ಒಂದು ರೀತಿ ಕಾರ್ಯಕ್ರಮಕ್ಕೆ ಬಂದ ನೆಂಟರಂತಾಗಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕುಮಾರಸ್ವಾಮಿ ಅವರ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು. 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR