ನವದೆಹಲಿ: ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ತಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಬುಧವಾರ ರಾತ್ರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಇದರ ವಿಚಾರಣೆ ಗುರುವಾರ ಮುಂಜಾನೆವರೆಗೂ ನಡೆಯಿತು.

ಪ್ರಮಾಣವಚನ ರದ್ದುಗೊಳಿಸಬೇಕು ಅಥವಾಮುಂದೂಡಬೇಕು ಎಂದು ಕಾಂಗ್ರೆಸ್ ನಾಯಕ, ವಕೀಲ ಅಭಿಷೇಕ್ ಮನು ಸಿಂಘ್ವಿ ಶತಪ್ರಯತ್ನ ನಡೆಸಿದರೂ ಅದು ಫಲ ನೀಡಲಿಲ್ಲ. ಪ್ರಮಾಣವಚನಕ್ಕೆ ತಡೆ ನೀಡಲು ನಿರಾಕರಿಸಿದ ತ್ರಿಸದಸ್ಯ ನ್ಯಾಯಪೀಠ, ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರಿಗೆ ನೀಡಿದ ಪತ್ರಗಳನ್ನು ತನಗೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು 
ಇಂದಿಗೆ ನಿಗದಿಪಡಿಸಿತು.

ಸುಪ್ರೀಂಕೋರ್ಟ್ ತೀರ್ಮಾನ  ಯಡಿಯೂರಪ್ಪ ಭವಿಷ್ಯ ನಿರ್ಧಾರವಾಗಲಿರುವುದು ಒಂದು ಕಡೆಯಾದರೆ, ಅವರು ವಿಶ್ವಾಸಮತ ಗಳಿಸಲು ವಿಪಕ್ಷಗಳ ಸದಸ್ಯರ ಬೆಂಬಲ ಪಡೆಯುವುದೂ ಸುಪ್ರೀಂ ತೀರ್ಪಿನ ಮೇಲೆ ಅವಲಂಬಿತವಾಗಿದೆ.