ಬಹುಮತ ಪಡೆಯಲು ರಾಜ್ಯಪಾಲರಿಂದ 15 ದಿನಗಳ ಕಾಲಾವಕಾಶ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶ ನದ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ಸನ್ನಿವೇಶ  ಎದುರಾಗಿದ್ದರೂ ಬಿಜೆಪಿ ಪಾಳೆಯದಲ್ಲಿ ಮಾತ್ರ ಗೆಲುವಿನ ವಿಶ್ವಾಸ ಕಡಿಮೆಯಾಗಿಲ್ಲ.

ಬೆಂಗಳೂರು : ಬಹುಮತ ಪಡೆಯಲು ರಾಜ್ಯಪಾಲರಿಂದ 15 ದಿನಗಳ ಕಾಲಾವಕಾಶ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶ ನದ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ಸನ್ನಿವೇಶ ಎದುರಾಗಿದ್ದರೂ ಬಿಜೆಪಿ ಪಾಳೆಯದಲ್ಲಿ ಮಾತ್ರ ಗೆಲುವಿನ ವಿಶ್ವಾಸ ಕಡಿಮೆಯಾಗಿಲ್ಲ. ಆದರೆ, ಮೇಲ್ನೋಟಕ್ಕೆ ಸಂಖ್ಯಾಬಲ ಇಲ್ಲದಿರುವ ಬಿಜೆಪಿ ಬಹುಮತ ಗಳಿಸಲು ಏನೇನು ಮಾಡಬಹುದು ಎಂಬುದರ ಲೆಕ್ಕಾಚಾರ ಇಂತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1 ಬಿಜೆಪಿಯ ಬಲ 104 . ಕಾಂಗ್ರೆಸ್ಸಿನ 78, ಜೆಡಿಎಸ್ ನ 37ಮತ್ತು ಇಬ್ಬರು ಪಕ್ಷೇತರರು ಸೇರಿ ಆಗುವ ಬಲ 117. ಅಂದರೆ, ಸರಳ ಬಹುಮತಕ್ಕೆ112 ಬೇಕಾಗುತ್ತದೆ. ಬಿಜೆಪಿ ಸರಳ ಬಹುಮತ ಗೆಲ್ಲಲು ಎಂಟು ಮಂದಿ ಶಾಸಕರ ಬೆಂಬಲ ಪಡೆಯ ಬೇಕಾಗುತ್ತದೆ.

2 ಇಬ್ಬರು ಪಕ್ಷೇತರರು ಮತ್ತು ಕಾಂಗ್ರೆಸ್-ಜೆಡಿಎಸ್ ನ 6 ಶಾಸಕರು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮಂಡಿಸಿದ ವೇಳೆ ಬೆಂಬಲಿಸುವಂತೆ ನೋಡಿಕೊಳ್ಳು ವುದು. ಇದರಿಂದ ಪ್ರತಿಪಕ್ಷಗಳ ಬಲ 109 ಕ್ಕೆ ಕುಗ್ಗಲಿದೆ. ಬಿಜೆಪಿ ಮ್ಯಾಜಿಕ್ ನಂಬರ್ 112 ಗಳಿಸಲಿದೆ. ಗೆಲುವು ಸುಲಭವಾಗುತ್ತದೆ.

3 ಪಕ್ಷೇತರ ಶಾಸಕರಿಗೆ ವಿಪ್ ಉಲ್ಲಂಘನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್‌ನ ಆರು ಮಂದಿ ಶಾಸಕರಿಗೆ ವಿಪ್ ಉಲ್ಲಂಘನೆಯ ಶಿಸ್ತುಕ್ರಮದ ಭೀತಿ ಎದುರಾಗ ಬಹುದು. ಆದರೆ, ಸರ್ಕಾರ ರಚನೆಯಾದ ನಂತರ ಸ್ಪೀಕರ್ ಆಡಳಿತಾರೂಢ ಬಿಜೆಪಿಯವರೇ ಆಗುವುದರಿಂದ ವಿಪ್ ಉಲ್ಲಂಘನೆಯಾದ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಸುಮ್ಮನಾಗಬಹುದು. 

4 ವಿಪ್ ಉಲ್ಲಂಘನೆ ಗೊಂದಲವೇ ಬೇಡ ಎಂದಾದಲ್ಲಿ ಶನಿವಾರ ಸದನದಲ್ಲಿ ಶಾಸಕರ ಹಾಜರಾತಿಯನ್ನೇ ಕುಗ್ಗಿ ಸುವುದು. ಅಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕೆಲವು ಶಾಸಕರು ಸದನಕ್ಕೇ ಬರದಂತೆ ನೋಡಿ ಕೊಳ್ಳುವುದು.

5 ಈಗಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರ ಒಟ್ಟು ಬಲ 221 ಆಗುತ್ತದೆ. ಆ ಪ್ರಕಾರ ಸರಳ ಬಹುಮತಕ್ಕೆ 112 ಬೇಕಾಗುತ್ತದೆ. ಒಂದು ವೇಳೆ ಆ ಬಣದ ಸುಮಾರು 15 ಚುನಾಯಿತರು ಸದನದ ಕಲಾಪದಿಂದಲೇ ದೂರ ಉಳಿದಲ್ಲಿ ಆಗ ಸದನದ ಒಟ್ಟು ಬಲ 206 ಕ್ಕೆ ತಗ್ಗಲಿದೆ. ಆಗ ಬಹುಮತಕ್ಕೆ ಬೇಕಾಗುವ ಮ್ಯಾಜಿಕ್ ನಂಬರ್ 104 ಆಗುತ್ತದೆ. ಆ ಸಂಖ್ಯೆ ಈಗ ಬಿಜೆಪಿ ಬಳಿಯಿದೆ.