10 ಮಂದಿ ಎನ್‌ಆರ್‌ಐ ಗಳಿಂದ ಮಾತ್ರವೇ ಮತದಾನ : ಎಲ್ಲರೂ ಕುಂದಾಪುರದವರು

Karnataka elections  Just 10 NRI voters from the state, all from one place
Highlights

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಭರದಿಂದಲೇ ಸಾಗಿದೆ.  ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಆದರೆ ಉದ್ಯೋಗದ ನಿಮಿತ್ತ ವಿದೇಶಗಳಲ್ಲಿ ನೆಲೆಸಿರುವವರಲ್ಲಿ 10 ಮಂದಿ ತಮ್ಮ ದೇಶಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 

ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಭರದಿಂದಲೇ ಸಾಗಿದೆ.  ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. 

ಆದರೆ ಉದ್ಯೋಗದ ನಿಮಿತ್ತ ವಿದೇಶಗಳಲ್ಲಿ ನೆಲೆಸಿರುವವರಲ್ಲಿ 10  ಮಂದಿ ತಮ್ಮ ದೇಶಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 

ಕರ್ನಾಟಕದಿಂದ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗಕ್ಕಾಗಿ ಜನರು ವಿದೇಶಗಳಿಗೆ ತೆರಳಿ ನೆಲೆಸಿದ್ದು, ಅದರಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಎನ್ ಆರ್ ಐಗಳು ಮತದಾನಕ್ಕೆ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಂಡು, ಮತದಾನ ಮಾಡಿದ್ದಾರೆ. 

ಇನ್ನು ಇಂದು ತಮ್ಮ ಹಕ್ಕನ್ನು ಚಲಾಯಿಸಿದ 10 ಮಂದಿಯೂ ಕೂಡ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರಾಗಿದ್ದಾರೆ. ಎಲ್ಲರೂ ತಮ್ಮ ಮಾಹಿತಿಯನ್ನು ಪಾರ್ಮ್ 6ಎ ಅಡಿಯಲ್ಲಿ ದಾಖಲಿಸಿಕೊಂಡಿದ್ದರು. 

ಒಟ್ಟು ಕರ್ನಾಟಕದ 14 ಲಕ್ಷ ಮಂದಿ ವಿಶ್ವದಾದ್ಯಂತ ಉದ್ಯೋಗ ನಿಮಿತ್ತ ನೆಲೆಸಿದ್ದು,  ಅದರಲ್ಲಿ 10 ಮಂದಿ ಮಾತ್ರವೇ ಮತ ಹಾಕಿದ್ದಾರೆ. 

loader