ಈ ಖಾತೆ ನಿರ್ವಹಿಸಿದವರು ಸೋಲೋದು ಗ್ಯಾರಂಟಿ : ಈ ಬಾರಿಯೂ ನಿಜವಾದ ನಂಬಿಕೆ

Karnataka Election Result : Rudrappa Lamani Loss Election
Highlights

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅನೇಕ ಸಚಿವರು ಈ ಬಾರಿ ಸೋಲನ್ನು ಅನುಭವಿಸಿದ್ದಾರೆ. ಇನ್ನೊಂದು ನಂಬಿಕೆಯಂತೆ ಮುಜರಾಯಿ ಖಾತೆ ಹೊಣೆ ಹೊತ್ತವರಿಗೆ ಸೋಲು ಖಚಿತ ಎನ್ನುವ ನಂಬಿಕೆ ಈ ಬಾರಿಯೂ ಕೂಡ ನಿಜವಾದಂತಾಗಿದೆ. 

ಹಾವೇರಿ: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅನೇಕ ಸಚಿವರು ಈ ಬಾರಿ ಸೋಲನ್ನು ಅನುಭವಿಸಿದ್ದಾರೆ. ಇನ್ನೊಂದು ನಂಬಿಕೆಯಂತೆ ಮುಜರಾಯಿ ಖಾತೆ ಹೊಣೆ ಹೊತ್ತವರಿಗೆ ಸೋಲು ಖಚಿತ ಎನ್ನುವ ನಂಬಿಕೆ ಈ ಬಾರಿಯೂ ಕೂಡ ನಿಜವಾದಂತಾಗಿದೆ. 

ಹಾವೇರಿ ಕ್ಷೇತ್ರದಲ್ಲಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಗೆದ್ದೇ ಗೆಲ್ಲುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿತ್ತು. ಆದರೆ,  ಫಲಿತಾಂಶ ಉಲ್ಟಾ ಹೊಡೆ ದಿದೆ. ಮುಜರಾಯಿ ಖಾತೆಯ ‘ಶಾಪವೋ’ ಎನ್ನುವಂತೆ ಅವರು ಸೋಲು ಕಂಡಿದ್ದಾರೆ. ಏಕೆಂದರೆ ಮುಜರಾಯಿ ಖಾತೆ ಹೊಂದಿದವರೆಲ್ಲ ಸೋಲು ಅನುಭವಿಸುತ್ತಾರೆ ಎಂಬ ಪ್ರತೀತಿ ಮೊದಲಿನಿಂದಲೂ ಇದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಜರಾಯಿ ಮಂತ್ರಿಯಾಗಿದ್ದ ಕೃಷ್ಣಯ್ಯ ಶೆಟ್ಟಿ ಅವರು ಸೋಲು ಕಂಡಿದ್ದುಂಟು.

ಕನ್ನಡ ಪ್ರಭಕ್ಕಾಗಿ  http://kpepaper.asianetnews.com ಕ್ಲಿಕ್ ಮಾಡಿ
ಎಲೆಕ್ಷನ್ ಸುದ್ದಿಗಾಗಿ https://goo.gl/cKC2ii ಕ್ಲಿಕ್ ಮಾಡಿ

loader