Asianet Suvarna News Asianet Suvarna News

ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣಗಳಿವು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೊಂದು ರಾಜ್ಯದಲ್ಲಿ ಕಮಲ ಅರಳಿಸಿದೆ. ಮತ್ತೆ ತಮ್ಮ ಅಲೆಯು ಕೆಲಸ ಮಾಡುತ್ತದೆ ಎನ್ನುವುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಸದ್ಯ ದೇಶದ 2 ರಾಜ್ಯಗಳಲ್ಲಿ ಮಾತ್ರವೇ ಕಾಂಗ್ರೆಸ್ ಆಡಳಿತವಿದ್ದು, ಉಳಿದೆಲ್ಲಾ ರಾಜ್ಯಗಳು ಬಿಜೆಪಿ ಪಾಲಾಗಿವೆ.  ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣಗಳು ಇಂತಿವೆ. 

Karnataka election result is a colossal failure for Rahul Gandhi

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೊಂದು ರಾಜ್ಯದಲ್ಲಿ ಕಮಲ ಅರಳಿಸಿದೆ. ಮತ್ತೆ ತಮ್ಮ ಅಲೆಯು ಕೆಲಸ ಮಾಡುತ್ತದೆ ಎನ್ನುವುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಸದ್ಯ ದೇಶದ 2 ರಾಜ್ಯಗಳಲ್ಲಿ ಮಾತ್ರವೇ ಕಾಂಗ್ರೆಸ್ ಆಡಳಿತವಿದ್ದು, ಉಳಿದೆಲ್ಲಾ ರಾಜ್ಯಗಳು ಬಿಜೆಪಿ ಪಾಲಾಗಿವೆ.  ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣಗಳು ಇಂತಿವೆ. 

*ಹೆಚ್ಚು ಬಾರಿ ರಾಜ್ಯದಲ್ಲಿ ದೇವಾಲಯಗಳಿಗೆ ಪ್ರವಾಸ ಮಾಡಿದ್ದರೂ ಕೂಡ ರಾಹುಲ್ ಟೆಂಪಲ್ ರನ್ ವರ್ಕೌಟ್ ಆಗಲಿಲ್ಲ. ಕಾಂಗ್ರೆಸ್ ಗೆ ಗೆಲುವು ತಂದು ಕೊಡುವಲ್ಲಿ ಸಫಲವಾಗಲಿಲ್ಲ.  

*ಸೋನಿಯಾ ಗಾಂಧಿ ಇಟಲಿ ಮೂಲವನ್ನೂ ಪ್ರಧಾನಿ ತಮ್ಮ ರ‍್ಯಾಲಿಗಳ ವೇಳೆ ಪ್ರಸ್ತಾಪಿಸಿ ಜನರ ಮೇಲೆ ಪ್ರಭಾವವನ್ನುಂಟು ಮಾಡಿದ್ದರು. ಇಂತಹ ಹೇಳಿಕೆಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿರುವುದರಲ್ಲಿ ಅನುಮಾನವಿಲ್ಲ. 

*ಬಿಜೆಪಿ ಗೆಲುವಿಗೆ ಬಲವಾದ ಸಾಮರ್ಥ್ಯವೊಂದು ಕಾರಣವಾಯ್ತು ಎನ್ನಬಹುದು. ಸಮೀಕ್ಷೆಗಳೆಲ್ಲವೂ ಕೂಡ ಬಿಜೆಪಿ ಗೆಲುವಿನ ಭವಿಷ್ಯವನ್ನೇ ನುಡಿದಿದ್ದವು. 

*ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ  ತೊಡಗಿದ್ದ ರಾಹುಲ್ ಗಾಂಧಿ  ಪ್ರಾದೇಶಿಕ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ವಿಫಲರಾದರು. ರಾಜ್ಯದಲ್ಲಿ ಜನರು ನೂರಾರು ಸಮಸ್ಯೆಗಳಿಂದ ಬಳಲುತ್ತಿದ್ದರು ಅದ್ಯಾವುದನ್ನೂ ಕೂಡ ರಾಹುಲ್ ಮಾತಲ್ಲಿ ಕೇಳಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಪ್ರದೇಶಗಳಿಗೆ ಅನುಗುಣವಾಗಿ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿ ಜನ ಮನ ಗೆಲ್ಲುವಲ್ಲಿ ಸಫಲರಾದರು.

*ಬರಗಾಲ ಹಾಗೂ ಗ್ರಾಮೀಣ ಪ್ರದೇಶಗಳ ಬಗ್ಗೆ ಕಾಂಗ್ರೆಸ್ ಹೆಚ್ಚಿನ ಗಮನ ವಹಿಸದಿರುವುದು ವೈಫಲ್ಯದ ಕಾರಣಗಳಲ್ಲಿ ಒಂದು. 

*ಸಿದ್ದರಾಮಯ್ಯ ಅವರು ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಯೂ ಕೂಡ ಚುನಾವಣೆ ಮೇಲೆ ಪ್ರಭಾವವನ್ನುಂಟು ಮಾಡಿರಬಹುದು. ಅಲ್ಲದೇ ಉತ್ತರ ಭಾರತದಲ್ಲಿಯೇ ಸಿದ್ದರಾಮಯ್ಯ ಪ್ರಚಾರ ಕಾರ್ಯವು ಹೆಚ್ಚಾಗಿ ನಡೆಸಿದ್ದರು.  

*ದಲಿತ ಮತ್ತು ಮುಸ್ಲಿಂ ಮತ ಪಡೆಯುವಲ್ಲಿ ಜೆಡಿಎಸ್ ಸಫಲವಾಗಿದ್ದು  ಅಹಿಂದ ಸಿದ್ಧಾಂತದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಗೆ ಮುಳುವಾಯ್ತು. 

*ಚುನಾವಣೆಗೂ ಮೊದಲೇ ಕಾಂಗ್ರೆಸ್ ಮುಖಂಡರು ತಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಂಡಿತವಾಗಿ ಮಾತನಾಡಿದ್ದರು. ಇದೂ ಕೂಡ ಅವರ ವೈಫಲ್ಯಕ್ಕೆ ಕಾರಣ ಎನ್ನಬಹುದಾಗಿದೆ. 

*ದಲಿತ ಮುಖಂಡರಾದ ಶ್ರೀ ರಾಮುಲು ಅವರನ್ನು ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಅಭ್ಯರ್ಥಿ ಎನ್ನುವಂತೆಯೇ ಬಿಂಬಿಸಲಾಗಿತ್ತು. 
ಅಲ್ಲದೇ ದಲಿತ ನಾಯಕಿ ಎಂದೇ ಕರೆಸಿಕೊಳ್ಳುವ ಮಾಯಾವತಿ ಅವರೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ದಲಿತ ಮತ ಪಡೆಯುವಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲು ಕಾರಣವಾಯ್ತು.  

*ಕರ್ನಾಟಕ ಚುನಾವಣೆಗೆ ಇನ್ನು ಕೆಲ ದಿನಗಳು ಬಾಕಿ ಇದೆ ಎನ್ನುವ ಸಮಯದವರೆಗೂ ಕೂಡ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

Follow Us:
Download App:
  • android
  • ios