50 ವರ್ಷದ ಬಳಿಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ

Karnataka Election Result : Congress Won KGF After 50 Years
Highlights

ಕೆಜಿಎಫ್ ಕ್ಷೇತ್ರದಲ್ಲಿ 50 ವರ್ಷಗಳ ನಂತರ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಸಂಸದ ಮುನಿಯಪ್ಪ ಪುತ್ರಿ ರೂಪಕಲಾ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. 

ಕೆಜಿಎಫ್: ಕೆಜಿಎಫ್ ಕ್ಷೇತ್ರದಲ್ಲಿ 50 ವರ್ಷಗಳ ನಂತರ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಸಂಸದ ಮುನಿಯಪ್ಪ ಪುತ್ರಿ ರೂಪಕಲಾ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ರೂಪಕಲಾ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಅಶ್ವಿನಿಯವರನ್ನು 40 ,827 ಮತಗಳ ಅಂತರದಿಂದ ಸೋಲಿಸಿದ್ದಾರೆ.

ರೂಪಕಲಾ 71,151 ಮತಗಳನ್ನು ಮತ್ತು ಬಿಜೆಪಿಯ ಅಶ್ವಿನಿ 30,324 ಮತಗಳನ್ನು ಗಳಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಎಸ್.ರಾಜೇಂದ್ರನ್ ಮೂರನೇ ಸ್ಥಾನದಲ್ಲಿದ್ದು 20,393 ಮತಗಳನ್ನು ಪಡೆದಿದ್ದಾರೆ. 

1967 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಆರ್. ಗೋಪಾಲ್ ಅವರು ಗೆದ್ದಿದ್ದೇ ಕೊನೆ. ಆ ನಂತರ ಕ್ಷೇತ್ರದಲ್ಲಿ ಎಂದೂ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ. ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಶಾಸಕಿ ರಾಮಕ್ಕ, ವೈ. ಸಂಪಂಗಿ ಪುತ್ರಿ ಎಸ್.ಅಶ್ವಿನಿ ಅವರು ಸಂಸದ ಮುನಿಯಪ್ಪ ಪುತ್ರಿ ರೂಪಕಲಾ ಅವರನ್ನು 153 ಮತಗಳ ಅಂತರದಿಂದ ಸೋಲಿಸಿದ್ದರು. ಆ ಸೋಲಿಗೆ ರೂಪಕಲಾ ಈಗ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ.

loader