ಕರ್ನಾಟಕ ಚುನಾವಣೆ : ಎಚ್.ಡಿ ರೇವಣ್ಣಗೆ ಗೆಲುವು

Karnataka Election : HD Revanna Win In Holenarasipura
Highlights

ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಮತ ಎಣಿಕೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಜೆಡಿಎಸ್ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ.

ಬೆಂಗಳೂರು : ಸದ್ಯದ ಚುನಾವಣಾ ಫಲಿತಾಂಶ ಪ್ರಕಾರ  ಜೆಡಿಎಸ್  ಹೊಳೆ ನರಸೀಪುರದಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಎಚ್.ಡಿ ರೇವಣ್ಣ ಅವರು 10  ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಮಂಜೇ ಗೌಡ,  ಎಂ.ಎನ್ ರಾಜು ಅವರನ್ನು ಸೋಲಿಸುವ ಮೂಲಕ ವಿಜಯ ಮಾಲೆ ಧರಿಸಿದ್ದಾರೆ.

ಇನ್ನ ಕೋಲಾರದಲ್ಲಿಯೂ ಕೂಡ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ್ ಗೌಡ ವಿಜಯಯಿಯಾಗಿದ್ದಾರೆ.  ಸೈಯದ್ ಜಮೀರ್ ಪಾಶಾ ಹಾಗೂ ವೆಂಕಟಾಚಲಪತಿ ಅವರನ್ನ ಸೋಲಿಸುವ ಮೂಲಕ ಜಯ ಸಾಧಿಸಿದ್ದಾರೆ. 

loader