Asianet Suvarna News Asianet Suvarna News

ಬೆಂಗಳೂರು : ಪುನರಾವರ್ತನೆಯಾಗಲಿದೆಯೇ 2013ರ ಚುನಾವಣೆ?

ರಾಜ್ಯದ ಇತರೆಡೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸ್ಥಾನ ಗಳಿಕೆಯಲ್ಲಿ ತೀವ್ರ ಏರುಪೇರು ಉಂಟಾಗಿದ್ದರೆ ಬೆಂಗಳೂರು ನಗರದಲ್ಲಿ ಮಾತ್ರ ಮೂರೂ ಪಕ್ಷ ಬಹುತೇಕ ಯಥಾಸ್ಥಿತಿ ಕಾಯ್ದುಕೊಳ್ಳುವ ಲಕ್ಷಣಗಳಿವೆ. ಇನ್ನು ಚುನಾವಣೆ ಬಾಕಿಯಿರುವ ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ಗೆಲ್ಲಲು ಸಾಧ್ಯವಾದರೇ ಆಗ ಬೆಂಗಳೂರಿನ ಫಲಿತಾಂಶ 2013 ರ ರಿಪೀಟ್ ಆಗಲಿದೆ. 

Karnataka Election : Congress Win More Seats

ಬೆಂಗಳೂರು : ರಾಜ್ಯದ ಇತರೆಡೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸ್ಥಾನ ಗಳಿಕೆಯಲ್ಲಿ ತೀವ್ರ ಏರುಪೇರು ಉಂಟಾಗಿದ್ದರೆ ಬೆಂಗಳೂರು ನಗರದಲ್ಲಿ ಮಾತ್ರ ಮೂರೂ ಪಕ್ಷ ಬಹುತೇಕ ಯಥಾಸ್ಥಿತಿ ಕಾಯ್ದುಕೊಳ್ಳುವ ಲಕ್ಷಣಗಳಿವೆ. ಇನ್ನು ಚುನಾವಣೆ ಬಾಕಿಯಿರುವ ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ಗೆಲ್ಲಲು ಸಾಧ್ಯವಾದರೇ ಆಗ ಬೆಂಗಳೂರಿನ ಫಲಿತಾಂಶ 2013 ರ ರಿಪೀಟ್ ಆಗಲಿದೆ. 

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಒಂದು ಸ್ಥಾನ ಕಡಿಮೆ ಗಳಿಸಿದೆ. ಆದರೆ, ಕಳೆದ ಬಾರಿ ಬಿಜೆಪಿ ಜಯಗಳಿಸಿದ್ದ ಜಯನಗರ ಕ್ಷೇತ್ರಕ್ಕೂ ಇನ್ನು ಚುನಾವಣೆ ನಡೆಯಬೇಕಿದೆ. ಇನ್ನು ಕಾಂಗ್ರೆಸ್ ಗೆಲುವು ಸಾಧಿಸಿದ್ದ  ರಾಜರಾಜೇಶ್ವರಿ ನಗರದಲ್ಲಿ ಇನ್ನೂ ಚುನಾವಣೆಯಾಗಿಲ್ಲ. ಹಾಗಿದ್ದೂ ಕಾಂಗ್ರೆಸ್ ಗಳಿಕೆ ಕಳೆದ ಬಾರಿಯಷ್ಟೇ ಇದೆ. ರಾಜರಾಜೇಶ್ವರಿ ನಗರವನ್ನು ಕಾಂಗ್ರೆಸ್ ಗೆದ್ದರೆ ಆಗ ಆ ಪಕ್ಷಕ್ಕೆ ಒಂದು ಸ್ಥಾನ ಹೆಚ್ಚುವರಿಯಾಗಿ ಬಂದಂತೆ ಆಗುತ್ತದೆ.

ಬೆಂಗಳೂರಿನ 28  ಕ್ಷೇತ್ರಗಳ ಪೈಕಿ 26 ಕ್ಕೆ ಮಾತ್ರ ಚುನಾವಣೆ ನಡೆದಿದ್ದು,  ಮಂಗಳವಾರದ 26 ಕ್ಷೇತ್ರಗಳ ಫಲಿತಾಂಶದಲ್ಲಿ ಕಾಂಗ್ರೆಸ್ 13, ಬಿಜೆಪಿ 11 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಜಯ ಸಾಧಿಸಿವೆ. 2013 ರ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 12, ಜೆಡಿಎಸ್ 3 ಸ್ಥಾನಗಳಲ್ಲಿ ಗೆದ್ದಿತ್ತು. ರಾಜರಾಜೇಶ್ವರಿನಗರ ಹಾಗೂ ಜಯನಗರ ಕ್ಷೇತ್ರ ಹೊರತುಪಡಿಸಿ 26  ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿದ್ದು, 26 ಕ್ಷೇತ್ರಗಳ ಪೈಕಿ 13  ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ.

ಒಂದು ಹೋಗಿ ಕೈಗೆ ಎರಡು ಬಂತು: ಆದರೆ, ಕಳೆದ ಬಾರಿ ತಾನು ಗೆದ್ದಿದ್ದ ಕ್ಷೇತ್ರಗಳಲ್ಲೇ ಈ 13ರ ಸಾಧನೆಯಾಗಿಲ್ಲ. ಕಾಂಗ್ರೆಸ್‌ನ ಹಾಲಿ  ಶಾಸಕರ ಪೈಕಿ ಚಿಕ್ಕಪೇಟೆಯ ವಿ. ದೇವರಾಜ್, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಸೋಲುಂಡಿದ್ದಾರೆ. ಕಳೆದುಕೊಂಡಿದ್ದ ಎರಡು ಸ್ಥಾನಗಳ ಬದಲಿಗೆ ಮೂರು ಹೆಚ್ಚುವರಿ ಸ್ಥಾನ ಗೆಲ್ಲಲು ಕಾಂಗ್ರೆಸ್ ಯಶಸ್ವಿಯಾಗಿದೆ. ಜೆಡಿಎಸ್‌ನಿಂದ ಕಾಂಗ್ರೆಸ್ ಸೇರ್ಪಡೆಗೊಂಡ ಜಮೀರ್‌ ಅಹ್ಮದ್‌ ಖಾನ್ ಚಾಮರಾಜ ಪೇಟೆಯಿಂದ ಹಾಗೂ ಪುಲಿಕೇಶಿನಗರದಿಂದ ಅಖಂಡ ಶ್ರೀನಿವಾಸ್‌ಮೂರ್ತಿ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ.

 ಇದರ ಜತೆಗೆ ಹೆಬ್ಬಾಳದ ಬಿಜೆಪಿ ಶಾಸಕ ನಾರಾಯಣಸ್ವಾಮಿ ಅವರನ್ನು ಸೋಲಿಸಿ ಬೈರತಿ ಸುರೇಶ್ ಕಾಂಗ್ರೆಸ್‌ಗೆ ಹೆಚ್ಚುವರಿ ಸ್ಥಾನ ತಂದುಕೊಟ್ಟಿದ್ದಾರೆ. ಹೀಗೆ ಕ್ಷೇತ್ರ ಬದಲಾದರೂ ಸ್ಥಾನ ಮಾತ್ರ ಅದೇ ಉಳಿದಿದೆ. ಹಾಲಿ ಬಾಕಿಯಿರುವ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲು ಶಕ್ತವಾದರೇ ಆಗ ಅದರ ಗಳಿಕೆ ಉತ್ತಮವಾಗಬಹುದು.

ಒಂದು ಸ್ಥಾನ ಕಳೆದುಕೊಂಡ ಬಿಜೆಪಿ: ಉಳಿದಂತೆ ಬಿಜೆಪಿಯು 2013 ಕ್ಕಿಂತ 1 ಸ್ಥಾನ ಕಡಿಮೆ ಗಳಿಸಿದೆ. ಆದರೆ, ಕಳೆದ ಬಾರಿ ತಾನು ಗೆದ್ದಿದ್ದ ದಾಸರಹಳ್ಳಿ ಬಿಜೆಪಿ ಶಾಸಕ ಮುನಿರಾಜು, ಹೆಬ್ಬಾಳ ಶಾಸಕ ನಾರಾಯಣಸ್ವಾಮಿ ಸೋಲಿ ನಿಂದಾಗಿ ಎರಡು ಸ್ಥಾನ ಕಳೆದುಕೊಂಡಿತ್ತು. ಆದರೆ, ಚಿಕ್ಕಪೇಟೆ ಕಾಂಗ್ರೆಸ್ ಶಾಸಕ ಆರ್ .ವಿ.ದೇವರಾಜ್ ಹಾಗೂ ಗೋವಿಂದರಾಜನಗರದ ಪ್ರಿಯಕೃಷ್ಣ ಅವರನ್ನು ಸೋಲಿಸುವ ಮೂಲಕ ಬಿಜೆಪಿ ಕಳೆದುಕೊಂಡಿದ್ದ ಎರಡು ಸ್ಥಾನವನ್ನು ಮತ್ತೆ ಪಡೆದುಕೊಂಡಿದೆ.

 ಬಿಜೆಪಿ ಅಧಿಕಾರದಲ್ಲಿದ್ದ ಜಯನಗರದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ ಈ ಜಯನಗರ, ಆರ್.ಆರ್.ನಗರ ಎರಡೂ ಕ್ಷೇತ್ರಗಳ  ಚುನಾವಣೆ ಹಾಗೂ ಫಲಿತಾಂಶದ ಆಧಾರದ ಮೇಲೆ ಬಿಜೆಪಿಯ ಅಂತಿಮ ಸ್ಥಾನ ಗಳಿಕೆ ನಿರ್ಧಾರವಾಗಲಿದೆ.

ಇನ್ನು 2013 ರಲ್ಲಿ ಬೆಂಗಳೂರು ನಗರದಿಂದ 3 ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ ಎರಡು ಸ್ಥಾನ ಮಾತ್ರ ಗೆದ್ದಿದೆ. ಕಳೆದ ಬಾರಿ ಗೆದ್ದಿದ್ದ ಚಾಮರಾಜಪೇಟೆ, ಪುಲಿಕೇಶಿನಗರ ಕ್ಷೇತ್ರಗಳನ್ನು ಕೈ ಜಾರಿಸಿಕೊಂಡಿರುವ ತೆನೆ ಹೊತ್ತ ಮಹಿಳೆ ಮಹಾಲಕ್ಷ್ಮೀ ಬಡಾವಣೆಯಿಂದ ಕೆ.ಗೋಪಾಲಯ್ಯ ಹಾಗೂ ದಾಸರಹಳ್ಳಿಯಿಂದ ಆರ್.ಮಂಜುನಾಥ್ ಸೇರಿ ಎರಡು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ.

https://kannada.asianetnews.com/karnataka-assembly-election-2018/karnataka-election-mayawati-magic-work-out-in-jds-p8svma

https://kannada.asianetnews.com/karnataka-assembly-election-2018/karnataka-election-result-bjp-win-or-lose-p8suwj

https://kannada.asianetnews.com/karnataka-assembly-election-2018/mysore-district-winners-details-p8rr56

Follow Us:
Download App:
  • android
  • ios