ಕಾಂಗ್ರೆಸ್ಸಿಗೆ ಇನ್ನೂ ಇದೆ ಆಪರೇಷನ್ ಕಮಲ ಭೀತಿ

Karnataka Election: Congress Still Fear On Operation Kamala
Highlights

ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲ ಶಾಸಕರನ್ನು ‘ಜೋಪಾನ’ ಮಾಡುವ ಹೊಣೆ ನೀಡಲಾಗಿದೆ. ಕಾಂಗ್ರೆಸ್ ಶಾಸಕರು ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಲು ಕಾಂಗ್ರೆಸ್ ಹಲವು ತಂತ್ರಗಳನ್ನು ಮಾಡುತ್ತಿದೆ. ಆಪರೇಷನ್ ಕಮಲಕ್ಕೆ ಒಳಗಾದರೆ ಆಗುವ ನಷ್ಟ ಹಾಗೂ ಬರುವ ಸಂಕಷ್ಟಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ಬೆಂಗಳೂರು[ಮೇ.21]: ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ಮತ ಸಾಬೀತುಪಡಿಸಲು ವಿಫಲವಾದ ಬಳಿಕವೂ ಕಾಂಗ್ರೆಸ್ ಪಕ್ಷಕ್ಕೆ ‘ಆಪರೇಷನ್ ಕಮಲದ’ ಭೀತಿ ಬಹುವಾಗಿ ಕಾಡುತ್ತಿದೆ. ಹೀಗಾಗಿ ಎಚ್.ಡಿ. ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವವರೆಗೂ ಶಾಸಕರನ್ನು ರಾಜಧಾನಿಯ ಹಿಲ್ಟನ್ ಹೋಟೆಲ್ ನಲ್ಲಿಯೇ ‘ಜೋಪಾನ’ ಮಾಡಲು ತೀರ್ಮಾನಿಸಿದೆ.
ಸ್ವಕ್ಷೇತ್ರಗಳಿಗೆ ಹೋಗಿದ್ದ ಕೆಲವು ಶಾಸಕರನ್ನೂ ವಾಪಸು ಕರೆಸಿಕೊಂಡಿರುವ ಕಾಂಗ್ರೆಸ್, ದೊಮ್ಮಲೂರಿನ ‘ಹಿಲ್ಟನ್ ಗಾಲ್ಫ್ ಲಿಂಕ್ಸ್’ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದೆ. ಬಹುಮತ ಸಾಬೀತು ಪಡಿಸುವವರೆಗೂ ಪಕ್ಷದ ಶಾಸಕರು ಒಗ್ಗಟ್ಟಾಗಿರುವುದು ಉತ್ತಮ. ಪಕ್ಷೇತರರ ಶಾಸಕರ ಮೇಲೆ ತೀವ್ರ ನಿಗಾ ವಹಿಸಬೇಕಾದ ಅಗತ್ಯವಿದೆ. ಬಹುಮತ ಸಾಬೀತುಪಡಿಸಲು ವಿಫಲವಾದ ಬಿಜೆಪಿಯು ಎಚ್.ಡಿ. ಕುಮಾರಸ್ವಾಮಿ ಬಹುಮತ ಸಾಬೀತುಪಡಿದಂತೆಯೂ ತಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತು ಪಡಿಸುವ ದಿನದವರೆಗೂ ಇಲ್ಲೇ ಉಳಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ. 
ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲ ಶಾಸಕರನ್ನು ‘ಜೋಪಾನ’ ಮಾಡುವ ಹೊಣೆ ನೀಡಲಾಗಿದೆ. ಕಾಂಗ್ರೆಸ್ ಶಾಸಕರು ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಲು ಕಾಂಗ್ರೆಸ್ ಹಲವು ತಂತ್ರಗಳನ್ನು ಮಾಡುತ್ತಿದೆ. ಆಪರೇಷನ್ ಕಮಲಕ್ಕೆ ಒಳಗಾದರೆ ಆಗುವ ನಷ್ಟ ಹಾಗೂ ಬರುವ ಸಂಕಷ್ಟಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.
ಸಚಿವ ಸ್ಥಾನದ ಲಾಬಿ ಬೇಡ: ಮುಂದೆ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯ ಅಗ್ನಿ ಪರೀಕ್ಷೆ ಇದೆ. ಈ ಹಂತದಲ್ಲಿ ಶಾಸಕರು ಒಟ್ಟಾಗಿ ರಾಜ್ಯಾದ್ಯಂತ ಪಕ್ಷ ಸಂಘಟಿಸಬೇಕಾಗಿದೆ. ಯಾವುದೇ ಲೋಕಸಭಾ ಕ್ಷೇತ್ರದಲ್ಲೂ ಪಕ್ಷಕ್ಕೆ ಹಿನ್ನಡೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಸಚಿವ ಸ್ಥಾನದ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಮನವೊಲಿಸಲಾಗುತ್ತಿದೆ.

ಇನ್ನೂ 3-4 ದಿನ ಶಾಸಕರು ಹೋಟೆಲ್‌’ನಲ್ಲಿ:
ಎಚ್.ಡಿ. ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸುವವರೆಗೂ ಕಾಂಗ್ರೆಸ್ ಶಾಸಕರು ಹಿಲ್ಟನ್ ಹೋಟೆಲ್ ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕುಮಾರಸ್ವಾಮಿ ಬುಧವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಹೀಗಾಗಿ ಒಂದು ದಿನದ ಮಟ್ಟಿಗೆ ಶಾಸಕರು ಕ್ಷೇತ್ರಗಳಿಗೆ ಹೋಗಿ ವಾಪಸು ಬಡುವುದು ತೊಂದರೆಯಾಗುತ್ತದೆ. ಹೀಗಾಗಿ ಶಾಸಕರು ಹೋಟೆಲ್ ನಲ್ಲಿಯೇ ಉಳಿದುಕೊಳ್ಳಲಿ ಎಂದು ತೀರ್ಮಾನಿಸಿದ್ದೇವೆ ಎಂದರು.

loader