ಬ್ರಾಹ್ಮಣರಿಗೆ ಮುಖ್ಯ ಹುದ್ದೆ ನೀಡಲು ಗೌಡರ ಒಲವು

Karnataka Election : Congress alliance with JD(S) in Karnataka
Highlights

ಕಾಂಗ್ರೆಸ್ ಮೂಲಗಳ ಪ್ರಕಾರ ಈಗಾಗಲೇ ದೆಹಲಿ ಮಟ್ಟದ ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ವರಿಷ್ಠರ ನಡುವೆ  ಮೈತ್ರಿ ಹೊಂದಾಣಿಕೆಯ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ಈ ಹಂತದಲ್ಲೇ ದೇವೇಗೌಡರು ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ ಎನ್ನಲಾಗುತ್ತಿದೆ. 

ಬೆಂಗಳೂರು [ಮೇ14] : ಕಾಂಗ್ರೆಸ್ ಮೂಲಗಳ ಪ್ರಕಾರ ಈಗಾಗಲೇ ದೆಹಲಿ ಮಟ್ಟದ ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ವರಿಷ್ಠರ ನಡುವೆ  ಮೈತ್ರಿ ಹೊಂದಾಣಿಕೆಯ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ಈ ಹಂತದಲ್ಲೇ ದೇವೇಗೌಡರು ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ ಎನ್ನಲಾಗುತ್ತಿದೆ. 

ಈ ಪೈಕಿ ಸಮ್ಮಿಶ್ರ ಸರ್ಕಾರ ರಚನೆಯಾದರೆ ಮುಖ್ಯ ಹುದ್ದೆಗೆ ಪ್ರಮಖ ಜಾತಿಗಳಾದ ಒಕ್ಕಲಿಗ, ಲಿಂಗಾಯತ ಹಾಗೂ ಕುರುಬ ಸಮುದಾಯದ ನಾಯಕರು ಬೇಡ ಎಂಬುದು ಮುಖ್ಯವಾದುದು ಎನ್ನಲಾಗುತ್ತಿವೆ. ಹೀಗಾಗಿ ಇತರೆ ಹಿಂದುಳಿದ ವರ್ಗದ ನಾಯಕರು,
ಪರಿಶಿಷ್ಟರು ಹಾಗೂ ಆರ್.ವಿ.ದೇಶಪಾಂಡೆ ಅವರಂತಹ ಬ್ರಾಹ್ಮಣ ನಾಯಕರಿಗೆ ಈ ಹುದ್ದೆಗಳನ್ನು ನೀಡುವ ಕುರಿತು ಜೆಡಿಎಸ್ ತನ್ನ ಅಭ್ಯಂತರವನ್ನು ಹೊಂದಿಲ್ಲ ಎಂಬ ಸಂದೇಶ ಕಾಂಗ್ರೆಸ್ಸಿಗರಿಗೆ ದೊರಕಿದೆ.

ಹೀಗಾಗಿ ಕಾಂಗ್ರೆಸ್‌ನಲ್ಲಿನ ಈ ವರ್ಗಗಳ ನಾಯಕರು, ವಿಶೇಷವಾಗಿ ಬ್ರಾಹ್ಮಣ ಹಾಗೂ ಪರಿಶಿಷ್ಟ ಜಾತಿ ನಾಯಕರು ಚುನಾವಣಾ ಫಲಿತಾಂಶವನ್ನು ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

loader