ಸಾಗರದಲ್ಲಿ ಕೈಕೊಟ್ಟ ಮತಯಂತ್ರ; ಮತದಾನ ತಾತ್ಕಾಲಿಕ ಸ್ಥಗಿತ

Karnataka Election 2018 Problem Found In VVPAT in Sagar
Highlights

ಸಾಗರ ತಾಲೂಕಿನ ಮತಗಟ್ಟೆ ಮರಾನಕುಳಿ ಗ್ರಾಮವು ಸೊರಬ ಮತಕ್ಷೇತ್ರಕ್ಕೆ ಸೇರಿದ್ದು, ಸೊರಬ ಕ್ಷೇತ್ರದ 232 ಮತಗಟ್ಟೆ ಕೇಂದ್ರವಾಗಿದೆ. ಮತಯಂತ್ರದ ದುರಸ್ಥಿಗೆ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಮತ ಚಲಾಯಿಸಲು ಬಂದ ಸಾರ್ವಜನಿಕರು ಮತಗಟ್ಟೆಯ ಹೊರಗೆ ಕಾಯುತ್ತಿದ್ದಾರೆ.

ಸಾಗರ (ಮೇ.12): ವಿವಿಪ್ಯಾಟ್ ಮತಯಂತ್ರ ಎರಡನೇ ಬಾರಿಗೂ ಕೆಟ್ಟನಿಂತ ಪರಿಣಾಮ ಮತದಾನವನ್ನ ಸ್ಥಗಿತಗೊಳಿಸಿರುವ ಘಟನೆ ಸಾಗರ ತಾಲೂಕಿನ ಮರಾನಕುಳಿ ಗ್ರಾಮದಲ್ಲಿ ನಡೆದಿದೆ.

ಸಾಗರ ತಾಲೂಕಿನ ಮತಗಟ್ಟೆ ಮರಾನಕುಳಿ ಗ್ರಾಮವು ಸೊರಬ ಮತಕ್ಷೇತ್ರಕ್ಕೆ ಸೇರಿದ್ದು, ಸೊರಬ ಕ್ಷೇತ್ರದ 232 ಮತಗಟ್ಟೆ ಕೇಂದ್ರವಾಗಿದೆ. ಇಲ್ಲಿನ ಮತಯಂತ್ರ ಒಮ್ಮೆ ಕೆಟ್ಟು ನಿಂತಿದ್ದರಿಂದ ಚುನಾವಣಾ ಅಧಿಕಾರಿಗಳು ಬದಲಾಯಿಸಿದ್ದರು. ಆದರೆ ಪುನಃ ಮತಯಂತ್ರ ಕೆಟ್ಟನಿಂತ ಹಿನ್ನಲೆಯಲ್ಲಿ ಮತದಾನವನ್ನ ಸ್ಥಗಿತಗೊಳಿಸಲಾಗಿದೆ. ಇದುವರೆಗೆ ಕೇವಲ 39 ಮತಗಳು ಮಾತ್ರ ಚಲಾವಣೆಯಾಗಿದ್ದು, ಮತಯಂತ್ರದ ದುರಸ್ಥಿಗೆ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಮತ ಚಲಾಯಿಸಲು ಬಂದ ಸಾರ್ವಜನಿಕರು ಮತಗಟ್ಟೆಯ ಹೊರಗೆ ಕಾಯುತ್ತಿದ್ದಾರೆ.

ಇದೇ ರೀತಿ ಗದಗ ಜಿಲ್ಲೆಯ ರೋಣಾ ತಾಲೂಕಿನ ಹೊಸಹಳ್ಳಿಯಲ್ಲಿ, ಹುಬ್ಬಳ್ಳಿಯ ಲ್ಯಾಮಿಂಗಟನ್ ಶಾಲೆಯ ಮತಗಟ್ಟೆಯಲ್ಲಿ, ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದ ಪಟ್ಟನಾಯಕಹಳ್ಳಿ ಸೇರಿದಂತೆ ರಾಜ್ಯದ ನಾನಾ ಕಡೆ ಮತಯಂತ್ರದಲ್ಲಿ ದೋಷ ಕಂಡುಬಂದಿದೆ. 

loader