ಸಿದ್ದು ಬ್ಯಾಗ್‌ ತಪಾಸಣೆ: ಸಿಕ್ಕಿದ್ದು ಪಂಚೆ, ಶೇವಿಂಗ್‌ ಸೆಟ್‌!

First Published 30, Apr 2018, 9:28 AM IST
Karnataka CM Siddaramaiah BaG Check
Highlights

 ಈಗಾಗಲೇ ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾರಿಗೂ ಕೂಡ ಇದರಿಂದ ವಿನಾಯಿತಿ ಇಲ್ಲ. ಇನ್ನು ಸಿಎಂ ಸಿದ್ದರಾಮಯ್ಯ ಅವರನ್ನೂ ಬಿಡದೇ ತಪಾಸಣೆ ನಡೆಸಲಾಗುತ್ತದೆ. ನಿನ್ನೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬ್ಯಾಗನ್ನು ಪರಿಶೀಲನೆ ಮಾಡಲಾಗಿದೆ. 

ಇಂಡಿ : ಈಗಾಗಲೇ ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾರಿಗೂ ಕೂಡ ಇದರಿಂದ ವಿನಾಯಿತಿ ಇಲ್ಲ. ಇನ್ನು ಸಿಎಂ ಸಿದ್ದರಾಮಯ್ಯ ಅವರನ್ನೂ ಬಿಡದೇ ತಪಾಸಣೆ ನಡೆಸಲಾಗುತ್ತದೆ. ನಿನ್ನೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬ್ಯಾಗನ್ನು ಪರಿಶೀಲನೆ ಮಾಡಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮಧ್ಯಾಹ್ನ ಇಂಡಿ ಪಟ್ಟಣದಲ್ಲಿ ಬಂದಿಳಿದ ಹೆಲಿಕಾಪ್ಟರ್‌ ಅನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದರು.

ಹೆಲಿಕಾಪ್ಟರ್‌ನಿಂದ ಸಿದ್ದರಾಮಯ್ಯ ಅವರು ಬಂದಿಳಿದ ತಕ್ಷಣವೇ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್‌ ಹಾಗೂ ಹೆಲಿಕಾಪ್ಟರ್‌ ಒಳಭಾಗದಲ್ಲಿದ್ದ ಮುಖ್ಯಮಂತ್ರಿಯವರ ಬ್ಯಾಗ್‌ ಸಹ ಪರಿಶೀಲನೆ ನಡೆಸಿದ್ದು ಆ ಸಂದರ್ಭದಲ್ಲಿ ಅಲ್ಲಿ ಕೇವಲ ಒಂದು ಪಂಚೆ ಹಾಗೂ ಶೇವಿಂಗ್‌ ಸೆಟ್‌ ಮಾತ್ರವೇ ಇದ್ದುದ್ದು ಕಂಡು ಬಂದಿತು.

loader