ಮಂಗಳೂರು: ಬಿಹಾರದಂಥ ರಾಜ್ಯಗಳಲ್ಲಿ ಜೈಲಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿ, ಗೆಲ್ಲೋದು ಸಾಮಾನ್ಯ. ಆದರೆ, ರಾಜ್ಯ ವಿಧಾನಸಭಾ ಚುನಾವಣೆಗೆ ಹೊಸತು ಎನ್ನುವಂತೆ ಅಭ್ಯರ್ಥಿಯೊಬ್ಬರು ಜೈಲಿನಲ್ಲಿದ್ದುಕೊಂಡೇ ಈ ಭಾರಿ ನಾಮಪತ್ರ ಸಲ್ಲಿಸಿದ್ದಾರೆ.

ದ‌ಕ್ಷಿಣ ಕನ್ನಡ  ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಂಇಪಿ ಪಕ್ಷದ ಅಭ್ಯರ್ಥಿ  ಶಮೀರ್ ಪರವಾಗಿ ಐಡಿಯಲ್ ಜಬ್ಬಾರ್ ಎಂಬುವರಿಂದ ನಾಮಪತ್ರ ಸಲ್ಲಿಕೆ ಯಾಗಿದೆ. ಶಮೀರ್‌ನನ್ನ 2014ರ ಪ್ರಕರಣದಲ್ಲಿ ನಿನ್ನೆ ಪೊಲೀಸರು ಬಂಧಿಸಿದ್ದರು.

ಬ್ರಹ್ಮರಕೂಟ್ಲು ಟೋಲ್ ಗೇಟ್ ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಶಮೀರ್, ಆಸ್ಪತ್ರೆಯಿಂದ ಪರಾರಿಯಾಗಿದ್ದ. ಆ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದ. ಈ ಆರೋಪದಡಿ ವಾರೆಂಟ್ ಜಾರಿಯಾಗಿತ್ತು. ಆರೋಪಿಯನ್ನು ನಿನ್ನೆ ಬಂಧಿಸಿ, ಸದ್ಯ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. 

ಶಮೀರ್ ಬಂಧನದ ಹಿನ್ನೆಲೆಯಲ್ಲಿ ಬೆಂಬಲಿಗರು ಬಂಟ್ವಾಳ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿ ಶಮೀರ್ ಮೇಲೆ ಇದುವರೆಗೆ ಆರು ಪ್ರಕರಣಗಳು ದಾಖಲಾಗಿವೆ.

#ನಮ್ಮ_ಎಲೆಕ್ಷನ್ |  ಮತದಾನ ನಿಮ್ಮ ಹಕ್ಕು, ನಿಮ್ಮ ಜವಾಬ್ದಾರಿ ಕೂಡಾ | ತಪ್ಪದೇ ಮತ ಹಾಕಿ – ಮೇ 12, 2018