ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯು ಹಲವು ರೀತಿಯ ಕೌತುಕಗಳನ್ನು ಒಳಗೊಂಡಿತ್ತು. ಅಂತಹ ಕೌತುಕಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ

ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯು ಹಲವು ರೀತಿಯ ಕೌತುಕಗಳನ್ನು ಒಳಗೊಂಡಿತ್ತು. ಅಂತಹ ಕೌತುಕಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ಬಾರಿ ಕರ್ನಾಟಕ ವಿಧಾನಸಭೆಗೆ ಬಿಎಸ್ಪಿ ಪ್ರವೇಶ. ಕೊಳ್ಳೇಗಾಲದಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಮಹೇಶ್‌ಗೆ ಜಯ.

 ಈ ಬಾರಿ ಪ್ರಮುಖ 3 ಪಕ್ಷ ಹೊರತುಪಡಿಸಿ ಇತರೆ ಇಬ್ಬರಿಗೆ ಮಾತ್ರ ಜಯಸಿಕ್ಕಿದೆ. ಮುಳಬಾಗಿಲಿನಲ್ಲಿ ಎಚ್.ನಾಗೇಶ್, ರಾಣೆಬೆನ್ನೂರಿನಲ್ಲಿ ಕೆಪಿಜೆಪಿ ಅಭ್ಯರ್ಥಿ ಆರ್.ಶಂಕರ್‌ಗೆ ಜಯ.

 ಜೆಡಿಎಸ್‌ನಿಂದ ಬಂಡಾಯ ಎದ್ದು ಕಾಂಗ್ರೆಸ್ ಸೇರಿದ್ದ 7 ಜನರ ಪೈಕಿ ನಾಲ್ವರಿಗೆ ಸೋಲು, ಮೂವರಿಗೆ ಮಾತ್ರ
ಜಯ.

 ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ವಿಧಾನಪರಿಷತ್‌ನ 9 ಹಾಲಿ ಸದಸ್ಯರ ಪೈಕಿ 5 ಜನರಿಗೆ ಗೆಲುವು ಸಿಕ್ಕಿದೆ. 7 ಈ ಬಾರಿ 264 ಮಹಿಳೆಯರು ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರು. ಇವರ ಪೈಕಿ ಕಾಂಗ್ರೆಸ್‌ನ 4, ಬಿಜೆಪಿ ಮೂವರು ಆಯ್ಕೆಯಾಗಿದ್ದಾರೆ. ೧೨ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 75 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು. ಕಳೆದ ಬಾರಿ ಈ ಪೈಕಿ 43 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಇಲ್ಲಿ 12 ಸ್ಥಾನ ಕಳೆದುಕೊಂಡಿದೆ. 16 ಈ ಬಾರಿ ಕಣಕ್ಕೆ ಇಳಿದಿದ್ದ 32 ಸಚಿವರ ಪೈಕಿ 16 ಸಚಿವರು ಸೋಲನ್ನಪ್ಪಿದ್ದಾರೆ.
21 ಪ್ರಧಾನಿ ನರೇಂದ್ರ ಮೋದಿ 6 ದಿನಗಳ ಅವಧಿಯಲ್ಲಿ ಒಟ್ಟು 21 ಜಿಲ್ಲೆಗಳಲ್ಲಿ ಪ್ರಚಾರ ರ್ಯಾಲಿ ಕೈಗೊಂಡಿದ್ದರು.

38 ಮೋದಿ ಪ್ರಚಾರ ಮಾಡಿದ ಪ್ರದೇಶಗಳ ವ್ಯಾಪ್ತಿಯ160 ಕ್ಷೇತ್ರಗಳ ಪೈಕಿ ೮೪ರಲ್ಲಿ ಬಿಜೆಪಿಗೆ ಜಯ. ಕಳೆದ ಬಾರಿ ಇಲ್ಲಿ ಬಿಜೆಪಿ 38 ರಲ್ಲಿ ಗೆದ್ದಿತ್ತು. ಈ ಬಾರಿ 61 ಹೊಸಬರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಬಿಜೆಪಿಯ 31, ಕಾಂಗ್ರೆಸ್‌ನ 17, ಜೆಡಿಎಸ್‌ನ 16, ಇತರೆ ಇಬ್ಬರು ಸೇರಿದ್ದಾರೆ.

ಎಲೆಕ್ಷನ್ ಸುದ್ದಿಗಾಗಿ https://goo.gl/cKC2ii ಕ್ಲಿಕ್ ಮಾಡಿ

https://kannada.asianetnews.com/karnataka-assembly-election-2018/karnataka-election-congress-win-more-seats-p8swdd

https://kannada.asianetnews.com/karnataka-assembly-election-2018/karnataka-election-result-bjp-win-or-lose-p8suwj