ಇಂದು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.  ಕೊನೆಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹರಕೆ ಈಡೇರಿದೆ.  

ಕೊಪ್ಪಳ (ಮೇ. 23):  ಇಂದು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಕೊನೆಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹರಕೆ ಈಡೇರಿದೆ. 

ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ಕಳೆದ ವರ್ಷ ಜನವರಿ 14 ರಂದು ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೆಂದು ದೇವೆಗೌಡರು ಪಲ್ಲಕ್ಕಿ ಹೊತ್ತಿದ್ದರು. ಪಲ್ಲಕ್ಕಿ ಹೊತ್ತ ಒಂದೇ ವರ್ಷದಲ್ಲಿ ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿದ್ದಾರೆ. ಮಗ ಮುಖ್ಯಮಂತ್ರಿಯಾದರೆ ಪ್ರತಿ ವರ್ಷ ಜಾತ್ರೆಗೆ ಬರುತ್ತೇನೆಂದು ದೇವೇಗೌಡರು ಹೇಳಿದ್ದರು. ಜಾತ್ರೆ ಮುಗಿದ ಕೆಲ ತಿಂಗಳ‌ ಬಳಿಕ ಮತ್ತೆ ಗವಿಮಠಕ್ಕೆ ಬಂದು ಪೂಜೆ ಸಲ್ಲಿಸಿದ್ದರು. 

ರಾಜಕೀಯ ನಾಯಕರ ಶಕ್ತಿ ಕೇಂದ್ರವಾಗಿರುವ ಗವಿಮಠಕ್ಕೆ ಅಮಿತ್ ಶಾ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು ಭೇಟಿ ನೀಡಿದ್ದರು. ಗವಿಮಠದ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದೆ ಪ್ರಸಿದ್ದಿ ಪಡೆದಿದೆ.