ಜೆಡಿಎಸ್ ಅಭ್ಯರ್ಥಿ ಅಪ್ಪು ಗೌಡ ಪಾಟೀಲರಿಂದ ನೀತಿ ಸಂಹಿತಿ ಉಲ್ಲಂಘನೆ

JDS Candidate Violate Code of Conduct
Highlights

ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ ಮನಗೂಳಿ  ಚುನಾವಣಾ ಪ್ರಚಾರಕ್ಕಾಗಿ  ಚಿಕ್ಕ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿರುವ ಘಟನೆ  ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. 

ವಿಜಯಪುರ (ಮೇ. 03): ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ ಮನಗೂಳಿ  ಚುನಾವಣಾ ಪ್ರಚಾರಕ್ಕಾಗಿ  ಚಿಕ್ಕ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿರುವ ಘಟನೆ  ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. 

ಬಸವನ ಬಾಗೇವಾಡಿ ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ್ ಮನಗೂಳಿ  ಏಪ್ರೀಲ್ 24ರಂದು ನಾಮಪತ್ರ ಸಲ್ಲಿಸಲು ಹೊರಟಿದ್ದ ವೇಳೆ  ಐವರು ಬಾಲಕಿಯರ ಮೇಲೆ ಹುಲ್ಲಿನ ಹೊರೆ ಹೊರೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. 

ಬಸವನ ಬಾಗೇವಾಡಿ ಪಟ್ಟಣದಲ್ಲಿ ಬಾಲಕಿಯರ ತಲೆ ಮೇಲೆ ಹುಲ್ಲಿನ ಮೂಟೆ ಹೊರಿಸಿ  ತೆರೆದ ವಾಹನದಲ್ಲಿ ಬಾಲಕಿಯರನ್ನು ನಿಲ್ಲಿಸಿ ಪ್ರಚಾರ ಮಾಡಿದ್ದಾರೆ.  ಅಪ್ರಾಪ್ತೆಯರನ್ನು ಬಳಸಿಕೊಳ್ಳುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.  ಚುನಾವಣಾ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನ ವಹಿಸಿದ್ದಾರೆ. 
ಸ್ಥಳದಲ್ಲೇ ಇದ್ರೂ ಸಹ ಅಭ್ಯರ್ಥಿ ವಿರುದ್ಧ ಚುನಾವಣಾ ಅಧಿಕಾರಿಗಳು ಕೇಸ್ ದಾಖಲಿಸಿಲ್ಲ. 
 

loader