ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ಮುಖಂಡರು

JDS And BSP Leaders Join Congress
Highlights

ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯ ಜೆಡಿಎಸ್ ಹಾಗೂ ಬಿಎಸ್‌ಪಿಯ ಪ್ರಮುಖ ಮುಖಂಡರು ಗೃಹ ಸಚಿವ  ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಜೆಡಿಎಸ್ ಪಕ್ಷದ ನಾರಾಯಣ್, ಕೃಷ್ಣಪ್ಪ,
ಗೋಪಾಲಪ್ಪ ಹಾಗೂ ಬಿಎಸ್‌ಪಿಯ ರಮೇಶ್ ಕಾಂಗ್ರೆಸ್ ಸೇರ್ಪಡೆಗೊಂಡ ಪ್ರಮುಖರು.

ಆನೇಕಲ್: ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯ ಜೆಡಿಎಸ್ ಹಾಗೂ ಬಿಎಸ್‌ಪಿಯ ಪ್ರಮುಖ ಮುಖಂಡರು ಗೃಹ ಸಚಿವ  ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಜೆಡಿಎಸ್ ಪಕ್ಷದ ನಾರಾಯಣ್, ಕೃಷ್ಣಪ್ಪ, ಗೋಪಾಲಪ್ಪ ಹಾಗೂ ಬಿಎಸ್‌ಪಿಯ ರಮೇಶ್ ಕಾಂಗ್ರೆಸ್ ಸೇರ್ಪಡೆಗೊಂಡ ಪ್ರಮುಖರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಾಗರಾಜ್: ಅತ್ತಿಬೆಲೆ ಪಟ್ಟಣದ ಎಚ್.ಎಂ.ನಾಗರಾಜ್, ಶಾಸಕ ಬಿ.ಶಿವಣ್ಣ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಶಿವಣ್ಣ, ಅತ್ತಿಬೆಲೆಯ ನಾಗರಾಜ್ ಮತ್ತು ಕುಟಂಬದ ಸದಸ್ಯರು ಹಾಗೂ ಅವರ ಬೆಂಬಲಿಗರ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು.

ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗೋಪಾಲ್, ಪುರಸಭಾ ಸದಸ್ಯರಾದ ಅಶ್ವಥ್‌ರೆಡ್ಡಿ, ಯಲ್ಲಪ್ಪ, ರಮೇಶರೆಡ್ಡಿ, ಎಸ್.ರವಿ, ಆನಂದರೆಡ್ಡಿ, ಶಂಕರರೆಡ್ಡಿ, ಛಲವಾದಿ ನಾಗರಾಜ್, ಜಿಮ್ ಸುರೇಶ್ ಕಾಂಗ್ರೆಸ್ ಸೇರ್ಪಡೆಗೊಂಡ ಪ್ರಮುಖರು.

loader