ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಇನ್ನು ಒಂದೇ ದಿನ ಚುನಾವಣೆಗೆ ಬಾಕಿ ಉಳಿದಿದೆ. ನಾಳೆಯೇ  ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.  ಒಂದು ವೇಳೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಈ 2 ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ ಎಂದು ಮುಖಂಡರೋರ್ವರು ಹೇಳಿಕೆ ನೀಡಿದ್ದಾರೆ.  

ಮುಂಬೈ: ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಇನ್ನು ಒಂದೇ ದಿನ ಚುನಾವಣೆಗೆ ಬಾಕಿ ಉಳಿದಿದೆ. ನಾಳೆಯೇ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 

ಮತದಾರ ಪ್ರಭು ಯಾರಿಗ ಒಲಿಯಲಿದ್ದಾನೆ ಎನ್ನುವುದು ನಾಳೆಯೇ ತೀರ್ಮಾನ ವಾಗಲಿದೆ. ಯಾರಿಗೆ ಹೆಚ್ಚು ಬಹುಮತ ದೊರೆಯುತ್ತದೆಯೋ ಅವರ ಸರ್ಕಾರ ರಚನೆಯಾಗಲಿದೆ. ಆದರೆ ಈ ಬಾರಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಈ 2 ಪಕ್ಷಗಳು ಮೖತ್ರಿ ಸರ್ಕಾರ ರಚನೆ ಮಾಡಲಿವೆ ಎನ್ನಲಾಗಿದೆ. 

ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಮಹಾರಾಷ್ಟ್ರದ ಬಿಜೆಪಿ ಮುಖಂಡ ಮುಂಗಂಟಿವಾರ್ ಹೇಳಿದ್ದಾರೆ.

ಈ ಹೇಳಿಕೆ ಒಂದು ರೀತಿಯಾಗಿ ಮೈತ್ರಿ ಸರ್ಕಾರ ರಚನೆಯಾಗುವ ಮುನ್ಸೂಚನೆಯನ್ನೇ ನೀಡಿದೆ.