ರೇಣುಕಾಚಾರ್ಯ ವಿರುದ್ಧ ತಿರುಗಿ ಬಿದ್ದ ಜಯಲಕ್ಷ್ಮೀ!

Jayalakshmi Slams Renukacharya
Highlights

ರೇಣುಕಾಚಾರ್ಯ ಕಳಂಕಿತರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.  ರೇಣುಕಾಚಾರ್ಯಗೆ ಟಿಕೆಟ್ ಕೊಡಬಾರದಿತ್ತು. ಕಳಂಕಿತರಿಗೆ ಯಾಕೆ ಟಿಕೆಟ್ ಕೊಟ್ರಿ?  ಎಂದು ಜಯಲಕ್ಷ್ಮೀ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಏ.24): ರೇಣುಕಾಚಾರ್ಯ ಕಳಂಕಿತರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.  ರೇಣುಕಾಚಾರ್ಯಗೆ ಟಿಕೆಟ್ ಕೊಡಬಾರದಿತ್ತು. ಕಳಂಕಿತರಿಗೆ ಯಾಕೆ ಟಿಕೆಟ್ ಕೊಟ್ರಿ?  ಎಂದು ಜಯಲಕ್ಷ್ಮೀ ವಾಗ್ದಾಳಿ ನಡೆಸಿದ್ದಾರೆ. 
ನಮ್ಮಿಬ್ಬರ ಮೇಲೆ ಕೇಳಿ ಬಂದಿರುವ ವಿಚಾರ ಈಗ ಕೇಸ್ ಕ್ಲೋಸ್ ಆಗಿರೋದ್ರಿಂದ ನಾನೇನು ಹೆಚ್ಚು ಮಾತಾನಾಡಲ್ಲ.  ಹಳೆ ವಿಚಾರವನ್ನು ಮತ್ತೆ ಕೆದಕಿಕೊಳ್ಳಲಾರೆ. ನಾನು  ನಿಂತ ನೀರಲ್ಲ ಹರಿಯುವ ನೀರು.  ಈ ಬಾರಿ ಗೆಲ್ಲುವ ಮೂಲಕ ಉತ್ತರ ಕೊಡುವೆ ಎಂದಿದ್ದಾರೆ. 

ಬಿಟಿಎಂ ಲೇ ಔಟ್’ನಲ್ಲಿ ಘಟಾನುಘಟಿಗರು ಯಾರೂ ಇಲ್ಲ.  ರಾಮಲಿಂಗಾ ರೆಡ್ಡಿಯವರು ವ್ಯಕ್ತಿಗತ ಒಳ್ಳೆಯವರೇ. ಆದರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕೆಲಸ ಮಾಡಿಲ್ಲ. ಅದಕ್ಕಾಗಿಯೇ ಬಿಟಿಎಂ ಲೇಔಟ್ ಆಯ್ಕೆ ಮಾಡಿಕೊಂಡಿದ್ದೇವೆ. ಮದ್ಯಪಾನ ನಿಷೇಧವನ್ನು ಮೊದಲು ಮಾಡುತ್ತೇವೆ.   ಹೊನ್ನಾಳಿಯಲ್ಲಿ ಜನ ಈಗಲೂ ಕೇಳ್ತಾ ಇದ್ದಾರೆ. ಆದರೆ ಸರ್ವೆಯಲ್ಲಿ  ಬಂದಿರುವ ವರದಿಯ ಪ್ರಕಾರ ಬಿಟಿಎಂ ಲೇಔಟ್ ನಲ್ಲಿ ಹಿಂದೂ ಮಹಿಳೆ ಬೇಕಾಗಿತ್ತು ಅನ್ನೋ‌ ಸರ್ವೆ ಬಂದಿರುವುದರಿಂದ ನಾನು ಇಲ್ಲಿ ಕಂಟೆಸ್ಟ್ ಮಾಡುತ್ತಿರುವೆ  ಎಂದು  ಜಯಲಕ್ಷ್ಮಿ ಹೇಳಿದ್ದಾರೆ.

loader