ಮೋದಿಗೆ ಇಡೀ ವಿಶ್ವವೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತೆ: ಜಗ್ಗೇಶ್

Jaggesh Slams CM Siddaramaiah
Highlights

ಯಶವಂತಪುರದಲ್ಲಿ ನನಗೆ ಟಿಕೆಟ್ ನೀಡಿರುವುದಕ್ಕೆ ಜನರ ಪ್ರತಿಕ್ರಿಯೆ ಅದ್ಭುತವಾಗಿದೆ.   ಟಿಕೆಟ್ ಕೊನೆ ಗಳಿಗೆಯಲ್ಲಿ ನೀಡಿದ್ದರೂ ಸಹ ನನಗೆ ಸಮಸ್ಯೆ ಇಲ್ಲ. ಜಗ್ಗೇಶ್ ಯಾರು ಅಂತ ಹೊಸದಾಗಿ ಪರಿಚಯ ಮಾಡಿಕೊಳ್ಳಬೇಕಿಲ್ಲ ಎಂದು ಜಗ್ಗೇಶ್ ಸುವರ್ಣ ನ್ಯೂಸ್’ಗೆ ಹೇಳಿದ್ದಾರೆ. 
 

ಬೆಂಗಳೂರು (ಏ. 29):  ಯಶವಂತಪುರದಲ್ಲಿ ನನಗೆ ಟಿಕೆಟ್ ನೀಡಿರುವುದಕ್ಕೆ ಜನರ ಪ್ರತಿಕ್ರಿಯೆ ಅದ್ಭುತವಾಗಿದೆ.   ಟಿಕೆಟ್ ಕೊನೆ ಗಳಿಗೆಯಲ್ಲಿ ನೀಡಿದ್ದರೂ ಸಹ ನನಗೆ ಸಮಸ್ಯೆ ಇಲ್ಲ. ಜಗ್ಗೇಶ್ ಯಾರು ಅಂತ ಹೊಸದಾಗಿ ಪರಿಚಯ ಮಾಡಿಕೊಳ್ಳಬೇಕಿಲ್ಲ ಎಂದು ಜಗ್ಗೇಶ್ ಸುವರ್ಣ ನ್ಯೂಸ್’ಗೆ ಹೇಳಿದ್ದಾರೆ. 

ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಬಗ್ಗೆ ಮಾತಾಡಲ್ಲ.  ಪಾಪ ಅವರೇನೊ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಅಂತ ಮಾಧ್ಯಮದಲ್ಲಿ ಬರ್ತಾ ನೋಡಿದೆ ಎಂದು ವ್ಯಂಗ್ಯವಾಡಿದ್ದಾರೆ. 
ಯಶವಂತಪುರ ಗೊಬ್ಬು ನಾರುವಂತೆ ಮಾಡಿದ್ದಾರೆ.  ನೂರು ಕೋಟಿ ಖರ್ಚಾದರೂ ಚುನಾವಣೆಗೆ ಖರ್ಚು ಮಾಡ್ತೀನಿ ಎಂದು ಸೋಮಶೇಖರ್ ಹೇಳ್ತಾರೆ.  ಅದರ ಅರ್ಥ ಎಲ್ಲೆಲ್ಲಿ ‌ಎಷ್ಟು ಸ್ವಾಹ ಮಾಡಿರಬಹುದು? ಮುಂದೊಂದು ದಿನ ನ್ಯಾಯಾಲಯಕ್ಕೆ ಹೋಗುವ ಪ್ರಸಂಗ ಅವರಿಗೆ ಬರಬಹುದು ಎಂದು ಜಗ್ಗೇಶ್ ಲೇವಡಿ ಮಾಡಿದ್ದಾರೆ. 

ಮೋದಿ ಎದುರಿಸಲು ನಾ ಒಬ್ಬನೇ ಸಾಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಮೋದಿ ಬಗ್ಗೆ ಮಾತಾಡೋಕೆ ಸಿದ್ದರಾಮಯ್ಯಗೆ ಬರಲ್ಲ ಅಂತ ಅವರ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಏನೇನೋ ಹೇಳ್ತಾರೆ, ನಮ್ಮ ನಾಯಕರಿಗೆ ಬುದ್ದಿ ಇಲ್ಲ ಎಂದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ.  ಮೋದಿಗೆ ಇಡಿ ವಿಶ್ವವೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡತ್ತೆ.  ಹೀಗಿರುವಾಗ ಸಿದ್ದರಾಮಯ್ಯನವರು? ಹೇಳುವುದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. 

loader