ಸಿಎಂ ಸಿದ್ದರಾಮಯ್ಯ ಆಪ್ತನಿಗೆ ಆದಾಯ ತೆರಿಗೆ ಶಾಕ್

First Published 28, Apr 2018, 12:42 PM IST
IT Shock For CM Close Aide
Highlights

ಕರ್ನಾಟಕ ಚುನಾವಣಾ ಅಖಾಡ ರಂಗೇರುತ್ತಿದೆ.  ಇದೇ ವೇಳೆ ವಿವಿಧೆಡೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಅತ್ಯಧಿಕ ಪ್ರಮಾಣದಲ್ಲಿ ದಾಖಲೆ ಹಾಗೂ ಸಂಪತ್ತನ್ನು ವಶಪಡಿಸಿಕೊಳ್ಳುತ್ತಿದೆ. ವಿವಿಧ ರಾಜಕೀಯ ಮುಖಂಡರ ಮನೆಗಳ ಮೇಲೂ ಕೂಡ ಐಟಿ ಹದ್ದಿನ ಕಣ್ಣಿರಿಸಿದೆ. 

ಬೆಂಗಳೂರು : ಕರ್ನಾಟಕ ಚುನಾವಣಾ ಅಖಾಡ ರಂಗೇರುತ್ತಿದೆ.  ಇದೇ ವೇಳೆ ವಿವಿಧೆಡೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಅತ್ಯಧಿಕ ಪ್ರಮಾಣದಲ್ಲಿ ದಾಖಲೆ ಹಾಗೂ ಸಂಪತ್ತನ್ನು ವಶಪಡಿಸಿಕೊಳ್ಳುತ್ತಿದೆ. ವಿವಿಧ ರಾಜಕೀಯ ಮುಖಂಡರ ಮನೆಗಳ ಮೇಲೂ ಕೂಡ ಐಟಿ ಹದ್ದಿನ ಕಣ್ಣಿರಿಸಿದೆ. 

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಿ ಮನೆ ಮೇಲೆ IT ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯ ಕನಿಷ್ಠ ಮೂಲ ವೇತನ ಆಯೋಗದ ಅಧ್ಯಕ್ಷರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಚಾಮರಾಜನಗರದಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಅಧಿಕಾರಿ ಉಮೇಶ್ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವಿಧ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. 

ಉಮೇಶ್, ಸಿಎಂ ಸಿದ್ದರಾಮಯ್ಯ ಸಂಬಂಧಿ ಮತ್ತು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರ ಆಪ್ತರಾಗಿದ್ದು, ಚುನಾವಣೆ ಹಿನ್ನೆಲೆ ಹಣ ಹಂಚಿಕೆ ಮಾಡಲು ಉಮೇಶ್ ಯತ್ನ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. 

loader