ಕಾರವಾರ: ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಅಂಕೋಲಾ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧ ಅಂಕೋಲಾ ಠಾಣೆಯಲ್ಲಿ ಐಟಿ ಅಧಿಕಾರಿಗಳಿಂದ ದೂರು ದಾಖಲಾಗಿದೆ.

ಮೇ 11ರಂದು ಐಟಿ ಇಲಾಖೆಯ ಉಪ ನಿರ್ದೇಶಕ ಬಾಬು ಸಾಹೇಬ್ ನಾರ್ವೆ ಸೈಲ್ ಆಪ್ತ ಮಂಗಲದಾಸ್ ಮನೆಯ ಮೇಲೆ ದಾಳಿ ನಡೆಸಿದ್ದರು. ಅಂಕೋಲಾ ತಾಲೂಕಿನ ಆವರ್ಸಾ ಗ್ರಾಮದ ಮನೆ ಮೇಲೂ ಐಟಿ ದಾಳಿ ನಡೆದಿತ್ತು. 

ಈ ಸಂದರ್ಭದಲ್ಲಿ ಮನೆಯ ಬಳಿ ಬಂದಿದ್ದ ಸೈಲ್ ಕಾರು ತಪಾಸಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಅಧಿಕರಾರಿಗಳ ಕರ್ತವ್ಯಕ್ಕೆ ಅಡ್ಡಿ ಸೈಲ್ ಅಡ್ಡಿಪಡಿಸಿದ್ದರು. ಕಾರನ್ನು ತಪಾಸಣೆ ಮಾಡದಂತೆ ಐಟಿ ಅಧಿಕಾರಿಗಳಿಗೆ ಹೇಳಿ, ಸೈಲ್ ಕಾರು ಚಲಾಯಿಸಿಕೊಂಡು ಹೋಗಿದ್ದರು. ಈ ಹಿನ್ನೆಲೆಯಲ್ಲಿ ದೂರನ್ನ ನೀಡಿದ ಐಟಿ ಅಧಿಕಾರಿಗಳು ಐಪಿಸಿ ಸೆಕ್ಷನ್ 353 ಹಾಗೂ 506 ಅಡಿಯಲ್ಲಿ ಸತೀಶ್ ಸೈಲ್ ವಿರುದ್ದ ದೂರು ದಾಖಲಿಸಿದ್ದಾರೆ.