ಜೆಡಿಎಸ್ - ಕಾಂಗ್ರೆಸ್ ಒಂದಾದರೆ ಬಿಜೆಪಿಗೆ ನಷ್ಟ

If Congress and JDS come together It tough for BJP
Highlights

ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದರೆ ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಈ ವಿಧಾನಸಭೆ ಚುನಾವಣೆ ಸಾಬೀತು ಮಾಡಿದೆ. 
 

ನವದೆಹಲಿ: ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದರೆ ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಈ ವಿಧಾನಸಭೆ ಚುನಾವಣೆ ಸಾಬೀತು ಮಾಡಿದೆ. 

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಚುನಾವಣೆಎದುರಿಸಿದರೆ ಬಿಜೆಪಿ ಈ ವಿಧಾನಸಭೆ ಚುನಾವಣೆಯಲ್ಲಿ ಕೇವಲ 68 ಸ್ಥಾನ ಗಳಿಸುತ್ತಿತ್ತು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 156 ಸ್ಥಾನ ಗಳಿಸುತ್ತಿದ್ದವು ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಬಿದ್ದಿರುವ ಮತ ಒಟ್ಟುಗೂಡಿಸಿದಾಗ ಕಂಡು ಬರುತ್ತದೆ.

ಲೋಕಸಭೆ ಚುನಾವಣೆಯಲ್ಲಿ ಇದು ಪುನರಾವರ್ತನೆಯಾದರೆ ಬಿಜೆಪಿಗೆ ರಾಜ್ಯದಲ್ಲಿ ಸಿಗುವುದು ಕೇವಲ 28ರಲ್ಲಿ 6 ಸ್ಥಾನ ಮಾತ್ರ. ಅವುಗಳೆಂದರೆ ಬಾಗಲಕೋಟೆ, ಹಾವೇರಿ, ಧಾರವಾಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಬೆಂ. ದಕ್ಷಿಣ ಕ್ಷೇತ್ರಗಳು ಮಾತ್ರ ಒಲಿಯುತ್ತವೆ.

loader