ಇನ್ನು ಚುನಾವಣಾ ಪ್ರಚಾರ ಮಾಡಲ್ಲ: ಸುದೀಪ್

I will not go to Election Campaign says Sudeep
Highlights

ಕಳೆದ ಮೂರು ದಿನಗಳಿಂದ ರಾಜಕೀಯ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟ ಸುದೀಪ್, ದಿಢೀರನೇ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ಇನ್ನುಮುಂದೆ ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಮಂಗಳವಾರ ಅವರು ಪ್ರಕಟಿಸಿದ್ದಾರೆ. ಹೀಗಾಗಿ ಬುಧವಾರ (ಇಂದು) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಚುನಾವಣಾ ಪ್ರಚಾರಕ್ಕೆ ಸುದೀಪ್ ಹೋಗುತ್ತಿಲ್ಲ.

ಬೆಂಗಳೂರು (ಮೇ. 09): ಕಳೆದ ಮೂರು ದಿನಗಳಿಂದ ರಾಜಕೀಯ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟ ಸುದೀಪ್, ದಿಢೀರನೇ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ಇನ್ನುಮುಂದೆ ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಮಂಗಳವಾರ ಅವರು ಪ್ರಕಟಿಸಿದ್ದಾರೆ. ಹೀಗಾಗಿ ಬುಧವಾರ (ಇಂದು) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಚುನಾವಣಾ ಪ್ರಚಾರಕ್ಕೆ ಸುದೀಪ್ ಹೋಗುತ್ತಿಲ್ಲ.

ಗೆಳೆಯ ರಾಜುಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಚುನಾವಣಾ ಪ್ರಚಾರ ಮಾಡುವುದಾಗಿ ಸುದೀಪ್ ಕೆಲವು ದಿನಗಳ ಹಿಂದೆ ಘೋಷಿಸಿದ್ದರು. ಅಂದಿನಿಂದಲೇ ಅವರ ನಿರ್ಧಾರವನ್ನು ವಿರೋಧ ಪಕ್ಷಗಳೂ ಅವರ ಜನಾಂಗಕ್ಕೆ ಸೇರಿದವರೂ ಟೀಕಿಸುತ್ತಲೇ ಬಂದಿದ್ದರು.  ಸುದೀಪ್ ಚುನಾವಣಾ ಪ್ರಚಾರ ಮಾಡುತ್ತಾರೆ ಎನ್ನುವ ವಿಷಯ ಅವರ ಅಭಿಮಾನಿಗಳ ನಡುವೆ ಪರ ವಿರೋಧ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತಾವು ರಾಜಕೀಯದಲ್ಲಿ ಗುರುತಿಸಿಕೊಳ್ಳದೇ ಕೇವಲ ಕಲಾವಿದನಾಗಿ ಇರಲು ಸುದೀಪ್ ತೀರ್ಮಾನಿಸಿದ್ದು ಚುನಾವಣಾ ಪ್ರಚಾರಕ್ಕೆ ಮಂಗಳ ಹಾಡಲು ನಿರ್ಧರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಗೆಳೆಯರ ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಇನ್ನುಮುಂದೆ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ. ಎಲ್ಲರಿಗೂ ನನ್ನ ಮೇಲೆ ಅಭಿಮಾನ, ಅವಶ್ಯಕತೆ ಇದೆ ಎಂಬುದು ನಿಜ. ಆದರೆ ನಾನು ಭಾಗ ವಹಿಸುವುದರಿಂದ ಚುನಾವಣಾ ಫಲಿತಾಂಶ ಬದಲಾಗುತ್ತದೆ ಎಂದೇನೂ ನಾನು ಭಾವಿಸುವುದಿಲ್ಲ. ಅಷ್ಟು ದೊಡ್ಡ ವ್ಯಕ್ತಿಯೂ  ನಾನಲ್ಲ. ನಾನು ಕಲಾವಿದ. ನನಗೆ ನನ್ನ ಪಯಣದಲ್ಲಿ ಜೊತೆಗಿದ್ದ ಅಭಿಮಾನಿಗಳು ಮತ್ತು ಗೆಳೆಯರ ಅಭಿ ಪ್ರಾಯವೇ ಮುಖ್ಯ. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ. ಇದನ್ನು ಗೆಳೆಯರು ಮತ್ತು ಅಭಿಮಾನಿಗಳ ಪರವಾಗಿ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಹಲವು ವರ್ಷಗಳಿಂದ ಪರಿಚಯ ಇರುವ ಗೆಳೆಯರಿಗೋಸ್ಕರ ಪ್ರಚಾರಕ್ಕೆ ಹೋಗಿದ್ದೆ. ನನ್ನ ಕಷ್ಟದ ದಿನಗಳಲ್ಲಿ ನನ್ನೊಂದಿಗೆ ನಿಂತವರಿಗೋಸ್ಕರ ಪ್ರಚಾರ ಮಾಡಿದ್ದೆ. ಇದಕ್ಕಾಗಿ ನನಗೆ ಯಾವ ವಿಷಾದವೂ ಇಲ್ಲ. ಆದರೆ ಇನ್ನುಮುಂದೆ ಪ್ರಚಾರಕ್ಕೆ ಹೋಗುವುದಿಲ್ಲ. ಈ ನಿರ್ಧಾರ ಪಕ್ಷಾತೀತವಾಗಿದ್ದು, ಯಾವೊಂದು ಪಕ್ಷವನ್ನೂ ಬೆಂಬಲಿಸುವ ಅಥವಾ ನಿರಾಕರಿ ಸುವ ಉದ್ದೇಶ ನನಗಿಲ್ಲ ಎಂದು ಸುದೀಪ್ ತಮ್ಮ ನಿಲು ವನ್ನು ಸ್ಪಷ್ಟಪಡಿಸಿದ್ದಾರೆ. ಸುದೀಪ್ ಅವರ ನಿಲುವಿಗೆ ಅವರ ಬೆಂಬಲಿಗರು ಮತ್ತು ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

loader