ಇನ್ನು ಮುಂದೆ ಚುನಾವಣಾ ಪ್ರಚಾರಕ್ಕೆ ಹೋಗಲ್ಲ: ಕಿಚ್ಚ ಸುದೀಪ್

I will not go for campaign says kichcha sudeep
Highlights

ಸ್ಯಾಂಡಲ‌್‌ವುಡ್ ನಟರಾದ ಕಿಚ್ಚ ಸುದೀಪ್, ದರ್ಶನ್ ಹಾಗೂ ಯಶ್ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳಿಗೂ ಸೇರದೇ, ತಮ್ಮ ಆಪ್ತರ ಪರ ಮತಯಾಚಿಸುತ್ತಿದ್ದಾರೆ. ಆಪ್ತರು, ಗೆಳೆಯರ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ಈಗಾಗಲೇ ಈ ನಟರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಸ್ಯಾಂಡಲ‌್‌ವುಡ್ ನಟರಾದ ಕಿಚ್ಚ ಸುದೀಪ್, ದರ್ಶನ್ ಹಾಗೂ ಯಶ್ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳಿಗೂ ಸೇರದೇ, ತಮ್ಮ ಆಪ್ತರ ಪರ ಮತಯಾಚಿಸುತ್ತಿದ್ದಾರೆ. ಆಪ್ತರು, ಗೆಳೆಯರ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ಈಗಾಗಲೇ ಈ ನಟರು ಸ್ಪಷ್ಟಪಡಿಸಿದ್ದಾರೆ.

ಆದರೂ, ಗಣಿಧಣಿಗಳ ಪರವಾಗಿ, ಕೆಲವು ಎಡಬಿಡಂಗಿಗಳ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ಈ ನಟರ ವಿರುದ್ಧ ಆಕ್ಷೇಪಗಳು ಕೇಳಿ ಬರುತ್ತಿವೆ. ಅಲ್ಲದೇ, ದುಡ್ಡು ಕೊಟ್ಟರೆ ಇವರು ಏನ್ ಬೇಕಾದರೂ ಮಾಡ್ತಾರೆ, ಎಂಬ ಆಪಾದನೆಯೂ ಇವೆ. ಇವೆಲ್ಲವುದಕ್ಕೆ ಕಿಚ್ಚ ಸುದೀಪ್ ಗೂಗಲ್ ಪ್ಲಸ್‌ನಲ್ಲಿ ಹಾಕಿರುವ ಪೋಸ್ಟ್ ಮೂಲಕ ಉತ್ತರಿಸಿದ್ದು, ಇನ್ನು ಮುಂದೆ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲವೆಂದಿದ್ದಾರೆ.

ಅವರು ತಮ್ಮ ಪೋಸ್ಟಿನಲ್ಲಿ ಹೇಳಿದ್ದೇನು?

'ನಾನು ಪ್ರಚಾರಕ್ಕೆ ಸೇರಿದ್ದು ಸುಮಾರು ವರ್ಷಗಳ ಪರಿಚಯದ ನನ್ನ ಕೆಲವು ಗೆಳೆಯರಿಗಾಗಿ. ಇವರು ಒಂದಲ್ಲ ಒಂದು ರೀತಿ ನನ್ನೊಟ್ಟಿಗೆ ನನ್ನ ಕಠಿಣ ಸಮಯದಲ್ಲಿ ನಿಂತವರು. ಸಣ್ಣದು ಅಥವಾ ದೊಡ್ಡದು ಎಂಬುದು ವಿಷಯವಲ್ಲ. ಅವರು ಅಂದು ನಿಂತದ್ದು ವಿಷಯ. ಈಗ ಅವರಿಗಾಗಿ ನಾನು ಅಲ್ಲಿರುವುದು  ಬಹುಶಃ ಅವರು ನನ್ನಿಂದ ಪಡೆಯುವ ಒಂದು ಸಣ್ಣ ಬೆಂಬಲ.  ಇದು ಕನಿಷ್ಠ ನಾನು ಅವರಿಗಾಗಿ ಮಾಡಬಹುದಾದದ್ದು. ಅದರಲ್ಲಿ ಯಾವುದೇ ವಿಷಾದವಿಲ್ಲ‌. ನನ್ನ ಗೆಳೆಯರ ಹಾಗೂ ಅಭಿಮಾನಿಗಳ ಸಲುವಾಗಿ ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ. ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗೂ ನನ್ನ ಉಪಸ್ಥಿತಿಯಿಂದ ಫಲಿತಾಂಶಗಳು ಬದಲಾಗುತ್ತದೆ ಎಂದೂ ನಾನಂದು ಕೊಳ್ಳುವುದಿಲ್ಲ. ನಾನು ಒಬ್ಬ ಕಲಾವಿದ. ನನ್ನ ಪಯಣದಲ್ಲಿ ನನ್ನೊಟ್ಟಿಗೆ ಇದ್ದಂತಹ ಗೆಳೆಯರು ಹಾಗೂ ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ. ಆದರೂ ಈ ನಿರ್ಧಾರ ನನ್ನೊಟ್ಟಿಗೆ ನಿಂತ ನನ್ನ ಅಭಿಮಾನಿಗಳು ಹಾಗು ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ. ನಾನು ಯಾವುದೇ ರೀತಿ ನನ್ನ ಕ್ರಮಗಳಲ್ಲಿ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ,' ಎಂದು ಹೇಳಿದ್ದಾರೆ.
 

loader