ನಾನು ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುವುದಿಲ್ಲ

I Don't champaign at Badami
Highlights

ಈ ನಡುವೆ  ಶ್ರೀರಾಮುಲು ಪರ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರೋಡ್ ಶೋ ನಡೆಸಿದ್ದಾರೆ. ಪ್ರಚಾರದಲ್ಲಿ ಜನಾರ್ದನ್ ರೆಡ್ಡಿ ಕೂಡ ಪಾಲ್ಗೊಂಡಿದ್ದರು. ಕರ್ನಾಟಕ ವಿಧಾನ ಸಭಾ ಚುನಾವಣೆ ಸ್ಟಾರ್ ಪ್ರಚಾರಕರ ಕಣವಾಗಿ ರಂಗೇರಿದೆ. ಹಲವು ನಟರು ಮೂರು ಪಕ್ಷದ ಪರ ಈಗಾಗಲೇ ಪ್ರಚಾರದಲ್ಲಿ ನಿರತರಾಗಿದ್ದಾರೆ. 

ಬೆಂಗಳೂರು(ಮೇ.04): ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಪರ ಸುದೀಪ್ ಪ್ರಚಾರ ನಡೆಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. 
ತಾವು ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುತ್ತೇನೆ ಎಂಬುವುದು ಸತ್ಯವಲ್ಲ. ಸುಮಾರು ವರ್ಷಗಳಿಂದ ಶ್ರೀರಾಮುಲು ಅವರು ಗೊತ್ತು. ಅವರಿಗೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಈ ನಡುವೆ  ಶ್ರೀರಾಮುಲು ಪರ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರೋಡ್ ಶೋ ನಡೆಸಿದ್ದಾರೆ. ಪ್ರಚಾರದಲ್ಲಿ ಜನಾರ್ದನ್ ರೆಡ್ಡಿ ಕೂಡ ಪಾಲ್ಗೊಂಡಿದ್ದರು. ಕರ್ನಾಟಕ ವಿಧಾನ ಸಭಾ ಚುನಾವಣೆ ಸ್ಟಾರ್ ಪ್ರಚಾರಕರ ಕಣವಾಗಿ ರಂಗೇರಿದೆ. ಹಲವು ನಟರು ಮೂರು ಪಕ್ಷದ ಪರ ಈಗಾಗಲೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಚಾಮರಾಜನಗರದಲ್ಲಿ ಮಾತಾಡಿದ್ದ ಶ್ರೀರಾಮುಲು, ಸುದೀಪ್ ನಮ್ಮ ಸಮುದಾಯದವರಾಗಿದ್ದು ನನ್ನ ಪರ ಪ್ರಚಾರ ಮಾಡಬೇಕೆಂದು ಮನವಿ ಮಾಡಿದ್ದರು. 

 

loader