ನಾನೂ ಡಿಸಿಎಂ ಹುದ್ದೆ ಆಕಾಂಕ್ಷಿ: ಎಂ ಬಿ ಪಾಟೀಲ್

I am also DCM post aspirant says  M B Patil
Highlights

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಉಪ ಮುಖ್ಯಮಂತ್ರಿ ಹುದ್ದೆಯ ಆಸೆಯೂ ಇದೆ ಎಂದು  ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.  ಎರಡು ಉಪಮುಖ್ಯಮಂತ್ರಿ ಹುದ್ದೆ ಬೇಕಿದೆ. ದಕ್ಷಿಣದಲ್ಲಿ ಪರಮೇಶ್ವರ್​ ಅಥವಾ ಡಿಕೆಶಿಗೆ ಡಿಸಿಎಂ ಹುದ್ದೆ  ಕೊಟ್ಟರೆ ಉತ್ತರದಲ್ಲೂ ಒಬ್ಬರಿಗೆ ಡಿಸಿಎಂ ಹುದ್ದೆ ಕೊಡಲಿ.  ನಮ್ಮ ಸಮುದಾಯದ ಯಾರಿಗೇ ಆಗಲಿ ಡಿಸಿಎಂ ಕೊಡಲಿ. ನಾನಾಗಬಹುದು,ಶಾಮನೂರು ಆಗಿರಬಹುದು. ನಾವು ಇಂತಹವರಿಗೆ ಡಿಸಿಎಂ ಹುದ್ದೆ ಕೊಡಿ ಅಂತ ಹೇಳಿಲ್ಲ. ಶಾಮನೂರಿಗೆ ಡಿಸಿಎಂ ಕೊಟ್ಟರೂ ಬೇಜಾರೇನಿಲ್ಲ ಎಂದು  ಎಂ.ಬಿ.ಪಾಟೀಲ್ ಹೇಳಿದ್ದಾರೆ. 
 

ಬೆಂಗಳೂರು (ಮೇ. 22): ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಉಪ ಮುಖ್ಯಮಂತ್ರಿ ಹುದ್ದೆಯ ಆಸೆಯೂ ಇದೆ ಎಂದು  ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 

ಎರಡು ಉಪಮುಖ್ಯಮಂತ್ರಿ ಹುದ್ದೆ ಬೇಕಿದೆ. ದಕ್ಷಿಣದಲ್ಲಿ ಪರಮೇಶ್ವರ್​ ಅಥವಾ ಡಿಕೆಶಿಗೆ ಡಿಸಿಎಂ ಹುದ್ದೆ  ಕೊಟ್ಟರೆ ಉತ್ತರದಲ್ಲೂ ಒಬ್ಬರಿಗೆ ಡಿಸಿಎಂ ಹುದ್ದೆ ಕೊಡಲಿ. ನಮ್ಮ ಸಮುದಾಯದ ಯಾರಿಗೇ ಆಗಲಿ ಡಿಸಿಎಂ ಕೊಡಲಿ. ನಾನಾಗಬಹುದು,ಶಾಮನೂರು ಆಗಿರಬಹುದು. ನಾವು ಇಂತಹವರಿಗೆ ಡಿಸಿಎಂ ಹುದ್ದೆ ಕೊಡಿ ಅಂತ ಹೇಳಿಲ್ಲ.  ಶಾಮನೂರಿಗೆ ಡಿಸಿಎಂ ಕೊಟ್ಟರೂ ಬೇಜಾರೇನಿಲ್ಲ ಎಂದು  ಎಂ.ಬಿ.ಪಾಟೀಲ್ ಹೇಳಿದ್ದಾರೆ. 

ಲಿಂಗಾಯತ ಸಮುದಾಯದಿಂದ 16 ಮಂದಿ ಶಾಸಕರಿದ್ದೇವೆ. ಎಂ.ಬಿ. ಪಾಟೀಲ್ ಗೆ ಸಚಿವ ಸ್ಥಾನ ನೀಡಬೇಡಿ ಎಂದು ದೇವೇಗೌಡರು ಎಲ್ಲಿಯೂ ಹೇಳಿಲ್ಲ. ಇದೊಂದು ಸುಳ್ಳು ಸುದ್ದಿಯಷ್ಟೇ ಎಂದು ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. 

ನನಗೆ ಜಲಸಂಪನ್ಮೂಲ ಖಾತೆಯೇ ಬೇಕಿಂದಿಲ್ಲ. ಈ ಬಗ್ಗೆ ಎರಡೂ ಪಕ್ಷದ ನಾಯಕರು ತೀರ್ಮಾನ ಮಾಡಬೇಕು.  78 ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ ಎಲ್ಲರನ್ನೂ ಮಂತ್ರಿಮಾಡೋಕೆ ಆಗಲ್ಲ ಎಂದಿದ್ದಾರೆ. 


 

loader