ಬಿಜೆಪಿ ಹೇಗೆ ಬಹುಮತ ಸಾಬೀತುಪಡಿಸುತ್ತದೆ.?

How BJP Win Floor Test
Highlights

ಅಂತೂ ಇಂತೂ ಬಿ.ಎಸ್.ಯಡಿಯೂರಪ್ಪ ಅವರು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಇನ್ನು ವಿಧಾನಸೌಧದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಬಹುಮತ ಸಾಬೀತುಪಡಿಸಿದಲ್ಲಿ ಮಾತ್ರ ಅವರದು ಪೂರ್ಣ ಪ್ರಮಾಣದ ಸರ್ಕಾರವಾಗಲಿದೆ. 

ಬೆಂಗಳೂರು: ಅಂತೂ ಇಂತೂ ಬಿ.ಎಸ್.ಯಡಿಯೂರಪ್ಪ ಅವರು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಇನ್ನು ವಿಧಾನಸೌಧದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಬಹುಮತ ಸಾಬೀತುಪಡಿಸಿದಲ್ಲಿ ಮಾತ್ರ ಅವರದು ಪೂರ್ಣ ಪ್ರಮಾಣದ ಸರ್ಕಾರವಾಗಲಿದೆ. 

ಇಲ್ಲದಿದ್ದರೆ ಅಲ್ಪಮತದ ಸರ್ಕಾರವಾಗಿ ಪತನಗೊಳ್ಳುವ ಸಾಧ್ಯ ತೆಯಿದೆ. ಆದರೆ, ವಿಶ್ವಾಸಮತ ಗೆಲ್ಲುವ ಭರವಸೆ ಹೊಂದಿರುವ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಮುಂದೇನುಮಾಡುತ್ತಾರೆ ಎಂಬುದು ಮಾತ್ರ ಕುತೂಹಲಕರವಾಗಿದೆ.
ಅವರ ಮುಂದೆ ಸದ್ಯಕ್ಕೆ ಕೆಲವು ಹಾದಿಗಳಿವೆ:

* ಶಾಸಕರಾಗಿ ಶಪಥ ಸ್ವೀಕರಿಸಿದ ಬಳಿಕ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸುವ ಮೂಲಕ ಸದನದ ಸಂಖ್ಯಾಬಲ ಕುಗ್ಗಿಸಬಹುದು. ಆಗ ಸುಲಭವಾಗಿ ಬಹುಮತ ಗಳಿಸಬಹುದು.

* ಒಂದು ಪಕ್ಷದ ಶಾಸಕರ ಒಟ್ಟು ಸಂಖ್ಯೆಯ 3ನೇ 2 ರಷ್ಟು ಶಾಸಕರು ಒಟ್ಟಾಗಿ ಬಿಜೆಪಿಗೆ ಬರುವಂತೆ ಮಾಡಬಹುದು. ಜೆಡಿಎಸ್‌ನಲ್ಲಿ 3 ನೇ 2 ರಷ್ಟು ಅಂದರೆ 26 ಶಾಸಕರು ವಲಸೆ ಹೋದರಷ್ಟೇ ಪಕ್ಷಾಂತರ ನಿಷೇಧದಿಂದ ಪಾರಾಗಬಹುದು. ಕಾಂಗ್ರೆಸ್ಸಿನ ೭೮ ಶಾಸಕರ ಪೈಕಿ 52 ಶಾಸಕರು ವಲಸೆ ಹೋದರಷ್ಟೇ ಪಕ್ಷಾಂತರ ನಿಷೇಧದಿಂದ ಪಾರಾಗಬಹುದು. ಇದು ಸುಲಭದ ಕೆಲಸವಲ್ಲ.

3 ಆತ್ಮಸಾಕ್ಷಿ ಅನುಸಾರ ಮತ ಗಳಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿ, ಕ್ರಾಸ್ ವೋಟಿಂಗ್ ನಡೆದರೂ ಬಹು ಮತ ಪಡೆಯಬಹುದು. ಪಕ್ಷಾಂತರ ನಿಷೇಧ ಕಾಯ್ದೆ ವಿರುದ್ಧ ಕಾನೂನು ಹೋರಾಟದ ರಿಸ್ಕ್ ತೆಗೆದುಕೊಂಡು ಶಾಸಕರಿಂದ ಅಡ್ಡಮತದಾನ ಮಾಡಿಸಬಹುದು.

4 ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರವಷ್ಟೇ ಶಾಸಕರಾಗುವರು. ಬಳಿಕವಷ್ಟೇ ಪಕ್ಷದ ವಿಪ್ ಜಾರಿ ಮಾಡಬಹುದಾಗಿದೆ. ಚುನಾಯಿತ ಸದಸ್ಯ ರನ್ನೇ ಪ್ರಮಾಣ ವಚನದಿಂದ ದೂರ ಉಳಿವಂತೆ ಮಾಡಿ ಸದನದ ಬಲ ಕುಗ್ಗಿಸಿ ಬಹುಮತ ಸಾಬೀತು ಮಾಡ ಬಹುದು. ಬಿಜೆಪಿ ಸರ್ಕಾರ ಬಹುಮತ ಗಳಿಸಿದ ನಂತರ  16 ಸದಸ್ಯರು ಶಪಥ ಸ್ವೀಕರಿಸುವಂತೆ ನೋಡಿಕೊಳ್ಳು
ವುದು. ಇದು ಈಗ ಕಾನೂನು ಚರ್ಚೆಗೆ ಒಳಗಾಗಿದೆ. 

5 ಮತ್ತೊಂದು ಸುತ್ತು ಜೆಡಿಎಸ್ ಜೊತೆ ಬೆಂಬಲ ಪಡೆಯುವ ಮಾತುಕತೆ ನಡೆಸಲು ಮುಂದಾಗಬಹುದು. ಕಾಂಗ್ರೆಸ್ ರೀತಿಯಲ್ಲಿಯೇ ಬೇಷರತ್ ಬೆಂಬಲ ನೀಡಲು ಬಿಜೆಪಿ ಮುಂದಾದರೂ ಆಶ್ಚರ್ಯವಿಲ್ಲ.

loader