ಚುನಾವಣೆಗೆ ಹೇಗೆ ಸಜ್ಜಾಗಿದೆ ಬೆಂಗಳೂರು..?

karnataka-assembly-election-2018 | Tuesday, May 8th, 2018
Sujatha NR
Highlights

ಚುನಾವಣೆಯ ಅಂಗವಾಗಿ ನಗರದಲ್ಲಿ 7,776 ಪೊಲೀಸ್ ಸಿಬ್ಬಂದಿ, 550 ಮೊಬೈಲ್ ಸ್ಕ್ವಾಡ್, 4,501 ಕೇಂದ್ರೀಯ ಅರೆಸೇನಾ ಪಡೆ, 16 ಡಿಸಿಪಿ, 6 ಎಸಿಪಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ತಿಳಿಸಿದ್ದಾರೆ. 
 

ಬೆಂಗಳೂರು :  ಚುನಾವಣೆಯ ಅಂಗವಾಗಿ ನಗರದಲ್ಲಿ 7,776 ಪೊಲೀಸ್ ಸಿಬ್ಬಂದಿ, 550 ಮೊಬೈಲ್ ಸ್ಕ್ವಾಡ್, 4,501 ಕೇಂದ್ರೀಯ ಅರೆಸೇನಾ ಪಡೆ, 16 ಡಿಸಿಪಿ, 6 ಎಸಿಪಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ತಿಳಿಸಿದ್ದಾರೆ. 

ಮೇ 12 ಮತದಾನಕ್ಕೆ ಹಾಗೂ ಮೇ 15ರಂದು ನಡೆಯಲಿರುವ ಮತ ಏಣಿಕೆಯಂದು ನಗರದ ಭದ್ರತೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಿ ಕೊಂಡಿದೆ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭೀತವಾಗಿ ಮತ ಗಟ್ಟೆಗೆ ಆಗಮಿಸಿ ಮತದಾನ ಮಾಡುವಂತೆ ಮನವಿ ಮಾಡಿದರು. 

ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿ ಕಾರಿ ಮಹೇಶ್ವರ ರಾವ್ ಮಾತನಾಡಿ, ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 91 ಲಕ್ಷ ಮತದಾರರಿದ್ದು, ಆ ಪೈಕಿ ಶೇ.74 ಮತದಾರರಿಗೆ ಈಗಾಗಲೇ ಗುರುತಿನ ಚೀಟಿ ಹಾಗೂ ವೋಟರ್ ಗೈಡ್ ವಿತರಣೆ ಮಾಡ ಲಾಗಿದೆ. ಉಳಿದವರಿಗೆ ಮಂಗಳವಾರದೊಳಗೆ ತಲುಪಿಸುವ ಕೆಲಸ ಮಾಡಲಾಗುವುದು. ಒಂದು ವೇಳೆ ಗುರುತಿನ ಚೀಟಿ ದೊರೆಯದಿದ್ದರೂ ಮತದಾರರು ಆತಂಕಕ್ಕೆ ಒಳಗಾಗು  ವುದು ಬೇಡ. ಆಯೋಗ ಸೂಚಿಸಿರುವ 12 ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ನಗರದಲ್ಲಿ ಒಟ್ಟು 26 ಸಾವಿರ ವಿಕಲಚೇತನ ಮತದಾರ ರನ್ನು ಗುರುತಿಸಲಾಗಿದೆ. ಅವರಿಗಾಗಿ ಮತ
ಗಟ್ಟೆಗೆ ಬರುವುದಕ್ಕೆ ವಾಹನದ ವ್ಯವಸ್ಥೆ, ಗಾಲಿ ಕುರ್ಚಿ ಸೇರಿ ಇನ್ನಿತರ ವ್ಯವಸ್ಥೆ ಕಲ್ಪಿಸುವ ಮೂಲಕ ಮತದಾರರ ಸ್ನೇಹಿ ಮತಗಟ್ಟೆಗಳಾಗಿ ರೂಪಿಸಲಾಗಿದೆ ಎಂದರು. 

431ಅಭ್ಯರ್ಥಿಗಳು ಕಣದಲ್ಲಿ: ಜಯನಗರ  ದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಮರಣದಿಂದಾಗಿ ಆ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ಉಳಿದಂತೆ 27 ವಿಧಾನ ಸಭಾ ಕ್ಷೇತ್ರಗಳಲ್ಲಿ 431 ಅಭ್ಯರ್ಥಿಗಳು ಕಣ ದಲ್ಲಿದ್ದಾರೆ. ಈವರೆಗೆ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಅಡಿಯಲ್ಲಿ 6 ಕೋಟಿ ರೂ. ನಗದು, 17 ಕೋಟಿ ರೂ. ಮೌಲ್ಯದ ಸರಕುಗಳನ್ನು ವಶಕ್ಕೆ ಪಡೆಯಲಾಗಿದ್ದು, 32 ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ, 29 ಕೋಟಿ ರೂ. ಮೌಲ್ಯದ ಸರಕು ವಶಕ್ಕೆ ಪಡೆದು ತನಿಖೆ
ನಡೆಸಲಾಗುತ್ತಿದೆ ಎಂದು ತಿಳಿಸಿದರು. 

100 ಗುಲಾಬಿ ಬಣ್ಣದ ಮತಗಟ್ಟೆ: 27 ಕ್ಷೇತ್ರಗಳಲ್ಲಿ ಒಟ್ಟು 8489 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜತೆಗೆ ಮಹಿಳಾ ಪ್ರತಿನಿಧಿ ಗಳಿಗೆ ಮತದಾನ ಮಾಡಲು ಪ್ರೋತ್ಸಾಹಿಸುವ ಉದ್ದೇಶದಿಂದ 100 ಪಿಂಕ್ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಅಂತಹ ಮತಗಟ್ಟೆಗಳು ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಕೂಡಿ ರಲಿವೆ. ಮಹಿಳಾ ಅಧಿಕಾರಿಗಳು ಸಿಬ್ಬಂದಿ ಮತಗಟ್ಟೆಗಳನ್ನು ಸಂಪೂರ್ಣವಾಗಿ ನಿರ್ವ ಹಣೆ ಮಾಡಲಿದ್ದಾರೆ ಎಂದು ವಿವರಿಸಿದರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR