ಲಿಂಗಾಯತ ಕೋಟಾದಡಿ ಎಚ್‌.ಕೆ ಪಾಟೀಲ್‌ಗೆ ಮಂತ್ರಿಗಿರಿ ಬೇಡ

First Published 23, May 2018, 8:00 AM IST
HK Patil May Get Minister Post
Highlights

ಎಚ್‌.ಕೆ. ಪಾಟೀಲ್‌ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಲ್ಲ. ಹೀಗಾಗಿ ಲಿಂಗಾಯತ ಕೋಟಾದಡಿ ಎಚ್‌.ಕೆ. ಪಾಟೀಲ್‌ಗೆ ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ನೀಡಬಾರದು ಎಂದು ಅಖಿಲ ಭಾರತ ವೀರಶೈವ ಮಹಾಸಭಾವು ಕಾಂಗ್ರೆಸ್‌ ಪಕ್ಷವನ್ನು ಆಗ್ರಹಿಸಿದೆ.

ಬೆಂಗಳೂರು :  ಎಚ್‌.ಕೆ. ಪಾಟೀಲ್‌ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಲ್ಲ. ಹೀಗಾಗಿ ಲಿಂಗಾಯತ ಕೋಟಾದಡಿ ಎಚ್‌.ಕೆ. ಪಾಟೀಲ್‌ಗೆ ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ನೀಡಬಾರದು ಎಂದು ಅಖಿಲ ಭಾರತ ವೀರಶೈವ ಮಹಾಸಭಾವು ಕಾಂಗ್ರೆಸ್‌ ಪಕ್ಷವನ್ನು ಆಗ್ರಹಿಸಿದೆ.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರಿಗೆ ಪತ್ರ ಬರೆದಿರುವ ಮಹಾಸಭಾದ ಯುವ ಘಟಕದ ರಾಜ್ಯಾಧ್ಯಕ್ಷ ಉಮೇಶ್‌ ಎಚ್‌. ಪಾಟೀಲ್‌, ‘ಎಚ್‌.ಕೆ. ಪಾಟೀಲ್‌ ನಮ್ಮ ಸಮುದಾಯದವರಲ್ಲ. ಆದರೂ, ಮಾದ್ಯಮಗಳಲ್ಲಿ ಲಿಂಗಾಯತ ಕೋಟಾದಡಿ ಸಚಿವ ಸ್ಥಾನ ನೀಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿದೆ. ಎಚ್‌.ಕೆ. ಪಾಟೀಲ್‌ ಎಂದೂ ತಮ್ಮ ಸಮುದಾಯದ ಹೆಸರು ಬಹಿರಂಗಪಡಿಸಿಲ್ಲ. ಹೀಗಾಗಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬ ಬಗ್ಗೆ ದಾಖಲೆಗಳಿದ್ದರೆ ಒದಗಿಸಲಿ’ ಎಂದು ಹೇಳಿದ್ದಾರೆ.

‘ಎಚ್‌.ಕೆ. ಪಾಟೀಲ್‌ ಎಂದೂ ತಮ್ಮ ಜಾತಿಯನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ಅವರು ನಾಡು ಕಂಡ ಅತ್ಯುತ್ತಮ ರಾಜಕಾರಣಿಯಾಗಿದ್ದು, ಅವರು ನಮ್ಮವರು ಎಂದಾದರೆ ನಮಗೂ ಹೆಮ್ಮೆ ಆಗುತ್ತದೆ. ಇಲ್ಲವಾದರೆ ಅವರು ಯಾವ ಜಾತಿಗೆ ಸೇರುತ್ತಾರೋ ಅದರಿಂದ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ನಮ್ಮ ಸಮುದಾಯದಿಂದ ಶಾಮನೂರು ಶಿವಶಂಕರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

loader