ಗದಗ
ಸಚಿವ ಎಚ್.ಕೆ. ಪಾಟೀಲ್ ಮತ್ತೆ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಶ್ರೀರಾಮುಲು ಬೆಂಬಲಿಗ ಅನಿಲ ಮೆಣಸಿನಕಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಪ್ರಾರಂಭದಲ್ಲಿ ಬಂಡಾಯದ ಮುನ್ಸೂಚನೆ ನೀಡಿದ್ದರು. ಈಗ ಎಲ್ಲವೂ ಸರಿಹೋಗಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಇಲ್ಲಿ ಬಿಎಸ್ಪಿ- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಅಷ್ಟೊಂದು ಪ್ರಭಾವ ಹೊಂದಿಲ್ಲ.

ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕ. 30 ಸಾವಿರಕ್ಕಿಂತಲೂ ಅಧಿಕವಾಗಿರುವ ಅಲ್ಪ ಸಂಖ್ಯಾತ ಮತಗಳೇ ಕ್ಷೇತ್ರದ ಭವಿಷ್ಯ ಬರೆಯಲಿವೆ. ಎಂಇಪಿಯಿಂದ ಸ್ಪರ್ಧಿಸಿರುವ ಶಿರಾಜ್ ಬಳ್ಳಾರಿ ಗಳಿಸುವ ಅಲ್ಪಸಂಖ್ಯಾತ ಮತಗಳ ಮೇಲೆ ಕಾಂಗ್ರೆಸ್ ಭವಿಷ್ಯ ಅಡಗಿದೆ. ಯಾರೇ ಗೆದ್ದರೂ ಅಂತರ ಮಾತ್ರ ಕಡಿಮೆ ಎನ್ನುವ ಪರಿಸ್ಥಿತಿ ಇದೆ.