ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡದ್ದಕ್ಕೆ ಕಾರಣ ಬಹಿರಂಗ

karnataka-assembly-election-2018 | Tuesday, May 1st, 2018
Nirupama K S
Highlights

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಕೃಷ್ಣ ಮಠಕ್ಕೆ ಭೇಟಿ ನೀಡುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಮಠಕ್ಕೆ ಮೋದಿ ಭೇಟಿ ನೀಡದ ಕಾರಣವೇನೆಂಬುದನ್ನು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ಉಡುಪಿ: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಕೃಷ್ಣ ಮಠಕ್ಕೆ ಭೇಟಿ ನೀಡುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಮಠಕ್ಕೆ ಮೋದಿ ಭೇಟಿ ನೀಡದ ಕಾರಣವೇನೆಂಬುದನ್ನು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

'ಚುನಾವಣಾ ಪ್ರಚಾರ ಸಂದರ್ಭದಲ್ಲಿ ದೇಗುಲಗಳಿಗೆ ಭೇಟಿ ನೀಡುವುದು ಬೇಡ. ಇಂಥ ಭೇಟಿಗಳನ್ನು ಕೇವಲ ರಾಜಕೀಯಕ್ಕೆ ಮಾತ್ರ ಮೀಸಲಿಡಲಾಗುತ್ತದೆ. ಚುನಾವಣೆ ನಂತರ ದೇಗುಲಗಳಿಗೆ ಭೇಟಿ ನೀಡುತ್ತೇನೆಂದು ತಿಳಿಸಿದ್ದಾರೆ,' ಎಂದಿದ್ದಾರೆ ಶ್ರೀಗಳು. 

'ಪರ್ಯಾಯ ಸಂದರ್ಭದಲ್ಲಿಯೂ ಪ್ರಧಾನಿ ಮೋದಿಯನ್ನು ಆಹ್ವಾನಿಸಲಾಗಿತ್ತು. ಆಗಲೂ ಕೃಷ್ಣ ಮಠಕ್ಕೆ ಬಂದಿರಲಿಲ್ಲ. ಅವರು ಬಂದಿಲ್ಲವೆಂದು ಬೇಸರವಿಲ್ಲ.  ಚುನಾವಣೆ ಸಂದರ್ಭದಲ್ಲಿ ದೇವರ ಅನುಗ್ರಹವಾಗುತ್ತದೆ, ಎಂದು ಮಠಕ್ಕೆ ಆಗಮಿಸಲು ಪತ್ರ ಬರೆದಿದ್ದೆ. ಪ್ರಣಬ್ ಮುಖರ್ಜಿ ಆಹ್ವಾನಿಸದೇ ಇದ್ದರೂ ಮಠಕ್ಕೆ ಭೇಟಿ ನೀಡಿದ್ದರು. ಮಂತ್ರಿಗಳು ಬರ್ತಾರೆ, ಹೋಗ್ತಾರೆ. ಜನರ ಕೆಲಸ ಆಗದಿದ್ದರೆ ನಮಗೆ ಬೇಸರವಾಗುತ್ತದೆ.  ಮಠಕ್ಕೆ ಬಂದಿಲ್ಲವೆಂದು ಬೇಸರವಿಲ್ಲ. ನಮ್ಮ ಆಪ್ತ ಕಾರ್ಯದರ್ಶಿಗೆ ಪ್ರಧಾನಿ ಕಾರ್ಯದರ್ಶಿ ಕರೆ ಮಾಡಿದ್ದಾರೆ. ರಾಜಕೀಯ ಸಮಾವೇಶ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದು, ಧಾರ್ಮಿಕ ಕಾರ್ಯಕ್ರಮವನ್ನೇ ನಿಗದಿಪಡಿಸುವಂತೆ ಸೂಚಿಸಿದ್ದಾರೆ,' ಎಂದು ಶ್ರೀಗಳು ತಿಳಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೃಷ್ಣ ಮಠಕ್ಕೆ ಭೇಟಿ ನೀಡದ್ದನ್ನು ಬಿಜೆಪಿ ಖಂಡಿಸಿತ್ತು. ಇದೀಗ ಮೋದಿಯೂ ಮಠಕ್ಕೆ  ಭೇಟಿ ನೀಡುವ ಕಾರ್ಯಕ್ರಮ ಇರಲಿಲ್ಲ. ಇದರಿಂದ ಬಿಜೆಪಿ ಮುಜುಗರಗೊಂಡಿತ್ತು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Nirupama K S